ಬೆಂಗಳೂರು : ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ವಿಧಾನ ಸಭೆ ಸಭಾಧ್ಯಕ್ಷರ ಸ್ಥಾನಕ್ಕೆ ಕೈ ಪಕ್ಷದ ಮಾಜಿ ಸಚಿವ ಯು ಟಿ ಖಾದರ್ ರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. ತಡರಾತ್ರಿ ಪಕ್ಷದ ಮುಖಂಡರು ತೀರ್ಮಾನ ಕೈ ಗೊಂಡಿದ್ದು, ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ವಿಧಾನ ಸಭೆ ಎಲೆಕ್ಷನ್ ನಲ್ಲಿ 135 ಸ್ಥಾನ ಗೆದ್ದಿರುವ ಕೈ ಪಕ್ಷಕ್ಕೆ ಇಬ್ಬರು ಪಕ್ಷೇತರರು ಸಹ ಬೆಂಬಲ ನೀಡಿದ್ದು, ಭಾರೀ ಬಹುಮತ ಹೊಂದಿದೆ, ಇಂದು ಬೆಳಿಗ್ಗೆ 11 ಘಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ ಖಾದರ್ ನಾಂಪತ್ರ ಸಲ್ಲಿಸಲಿದ್ದಾರೆ, ಮೇ 24 ರಂದು ವಿಧಾನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ, ಮಂಗಳವಾರ 12 ಒಳಗೆ ಸ್ಪೀಕರ್ ಎಲೆಕ್ಷನ್ ಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.
ಆರ್.ವಿ. ದೇಶಪಾಂಡೆ ಹಾಗೂ ಎಚ್. ಕೆ. ಪಾಟೀಲ್ ಅವರು ಸ್ಪೀಕರ್ ಆಗಿ ಒಪ್ಪಲು ತಯಾರಿಲ್ಲ. ಇಬ್ಬರು ನಾಯಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ಆಯ್ಕೆ ಸಭೆಯ ಬಳಿಕ ನಿರ್ಧಾರ ಪ್ರಕಟವಾಗಲಿದೆ .ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಕೆ.ಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಯು.ಟಿ ಖಾದರ್ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.