ಬೆಂಗಳೂರು : ವಸತಿ ಸಚಿವ ವಿ ಸೋಮಣ್ಣ ಅಮಿತ್ ಷಾರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಕ್ಷದಲ್ಲಿ ತಮಗಾದ ನೋವಿನ ವಿಚಾರವನ್ನ ವಿ.ಸೋಮಣ್ಣ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಅಮಿತ್ ಶಾ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ನಾನು ಬಂದ ಕೆಲಸ ಆಗಿದೆ, ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಆಗಿದೆ. ನನ್ನ ಇಲಾಖೆ ಕೆಲಸದ ವಿಚಾರವಾಗಿ ಇಲ್ಲಿಗೆ ಬಂದಿದ್ದೆ. ಇದಕ್ಕೆ ಬೇಕಾದ ವಿಷ್ಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಧರ್ಮೇಂದ್ರ ಪ್ರಧಾನ್ ಅವರನ್ನ ಸಹ ಭೇಟಿ ಆಗಿದ್ದೇನೆ. ಯಾವುದೇ ವೈಯಕ್ತಿಕ ಕೆಲಸ ಅಲ್ಲಾ, ಪಾರ್ಟಿ ಕೆಲಸಕ್ಕೆ ಬಂದಿದ್ದು ಅಷ್ಟೇ ಒಟ್ನಲ್ಲಿ ನಾನು ಬಂದಿದ್ದು ಕೆಲಸ ಆಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ನನ್ನ ಮಗ ಮತ್ತು ವಿಜಯೇಂದ್ರ ಮಧ್ಯೆ ಏನಾಗಿದೆಯೋ ಗೊತ್ತಿಲ್ಲ. ಏನೇ ಗೊಂದಲ ಇದೆಯೋ ಅದನ್ನ ಅವರ ಬಳಿ ಕೇಳಿ, ನನ್ನ ಬಳಿ ಏಕೆ ಕೇಳುತ್ತೀರಿ. ಏನೇ ಸಮಸ್ಯೆ ಆಗಿದ್ರೆ ಕ್ರಮ ಕೈಗೊಳ್ಳಿ ಅಂತ ಈಗಾಗಲೇ ಹೇಳಿದ್ದೇನೆ ಎಂದರು. ನಾನು ಸತ್ಯ ಮಾತಡ್ತೇನೆ, ನನ್ನದು ಯಡಿಯೂರಪ್ಪ ನವರದ್ದು ತಂದೆ ಮಗ ಸಂಬಂಧ. ಯಡಿಯೂರಪ್ಪನವರ ಬಗ್ಗೆ ದ್ವೇಷ ಮಾಡಿ ನಂಗೆ ಏನು ಲಾಭ ಎಂದು ಹೇಳಿದರು.
ಇನ್ನೂ ಕೇಂದ್ರ ಮತ್ತು ರಾಜ್ಯ ವರಿಷ್ಠರು ಅವರನ್ನು ಉಳಿಸಿಕೊಂಡು 150 ಸ್ಥಾನಗಳನ್ನು ಗೆಲ್ಲಲು ಅವರ ಶಕ್ತಿಯನ್ನು ಬಳಸಿಕೊಳ್ಳಬೇಕು. ಸೋಮಣ್ಣ ಅವರಿಗೆ ಬೆನ್ನುಲುಬಾಗಿ, ಅವರೊಂದಿಗೆ ನಾವು ಇರುತ್ತೇವೆ. ಸೋಮಣ್ಣ ಕೂಡ ಬಿಜೆಪಿ ಬಿಡುವ ಯೋಚನೆ ಮಾಡಬಾರದು ಎಂದು ಸೋಮಣ್ಣ ಬೆಂಬಲಿಗರು ಹೇಳಿದ್ದಾರೆ.