ಹುಬ್ಬಳ್ಳಿ: ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರೋ ಪ್ರಶ್ನೆಯೇ ಇಲ್ಲ, ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ವಿ. ಸೋಮಣ್ಣ ನನ್ನ ಸಂಪರ್ಕದಲ್ಲಿದ್ದಾರೆ. ನಾನು ಸೋಮಣ್ಣರೊಂದಿಗೆ ಮಾತಾಡಿದ್ದೇನೆ ಎಂದು ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳಿಗೆ ಫುಲ್ ಸ್ಟಾಪ್ ಇಟ್ಟರು. ಇನ್ನೂ ಮಂಡ್ಯದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿರುವ ಸಂಸದೆ ಸುಮಲತಾ ಬಿಜೆಪಿ ಸೇರುತ್ತಾರೆ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ ಸೋಮಣ್ಣ ಕಾಂಗ್ರೆಸ್ ಸೇರಲ್ಲ, ಸುಮಲತಾ ಬಿಜೆಪಿ ಪರ ಇದ್ದಾರೆ ಎಂದು ತಿಳಿಸಿದರು. ಮಂಡ್ಯದ ಮದ್ದೂರಿನಲ್ಲಿ 12 ರಂದು ಪ್ರಧಾನಿ ಮೋದಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ನಾನು ಮಂಡ್ಯಕ್ಕೆ ಮೊನ್ನೆ ಭೇಟಿ ನೀಡಿದ್ದೆ. ಮಂಡ್ಯ ಸಂಸದೆಯಾಗಿ ಸುಮಲತಾ ನನ್ನ ಸ್ವಾಗತಿಸಿದ್ದರು ಎಂದರು. ಪ್ರಧಾನಿ ಕಾರ್ಯಕ್ರಮದಲ್ಲಿ ಯಾರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ರಮ ಇರುವುದಿಲ್ಲ, ಸೂಕ್ತ ಸಮಯದಲ್ಲಿ ನಿಮಗೆ ಎಲ್ಲಾ ವಿಷಯ ತಿಳಿಸಲಾಗುತ್ತದೆ ಎಂದರು.