ವಡೋದರಾ: 51 ದಿನಗಳಿಂದ ನಿಗೂಢವಾಗಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಮಾಡುವಂತೆ ಪೋಷಕರೊಬ್ಬರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗೆ ಪತ್ರ ಬರೆದಿದ್ದಾರೆ.
ಹರಾನಿ ಪ್ರದೇಶದಲ್ಲಿ ವಾಸಿಸುತ್ತಿದ್ದ 24 ವರ್ಷದ ಅವಳಿ ಸಹೋದರಿಯರು ನಾಪತ್ತೆಯಾಗಿದ್ದಾರೆ. ಸಾರಿಕಾ ಹಾಗೂ ಶೀತಲ ನಾಪತ್ತೆಯಾಗಿದ್ದು, ಮಕ್ಕಳ ತಂದೆ ಚಿಮನ್‌ಭಾಯ್ ವಾಂಕರ್ ಎಂಬುವವರು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಠಾಣೆಗೆ ಸುಮಾರು ಬಾರಿ ಅಲೆದಾಡಿದರೂ ಪೊಲೀಸರಿಂದ ಉತ್ತರ ಬಂದಿಲ್ಲ, ಹೀಗಾಗಿ ನನ್ನ ಮಕ್ಕಳನ್ನು ಹುಡುಕಿಕೊಡಿ ಎಂದು ಮುಖ್ಯಮಂತ್ರಿ ಹಾಗೂ ರಾಜ್ಯ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಸಹೋದರಿಯರಿಬ್ಬರೂ ಕಾಲೇಜು ಬಿಟ್ಟು ಹೋಗುತ್ತಿರುವುದು ಕಂಡು ಬಂದಿದೆ. ಆದರೆ ನಂತರ ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ತಂದೆ ಚಿಮನ್ ವಾಂಕರ್ ಇಬ್ಬರು ಹೆಣ್ಣು ಮಕ್ಕಳನ್ನು ಭೇಟಿಯಾಗದೇ ತುಂಬಾ ನೊಂದಿದ್ದು, ಆದಷ್ಟು ಬೇಗ ಮನೆಗೆ ಮರಳುವಂತೆ ಮನವಿ ಮಾಡಿದ್ದಾರೆ.