Wednesday, May 31, 2023
spot_img
- Advertisement -spot_img

ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲವನ್ನು ಕೊಡುತ್ತಾರೆ : ರಾಜ್ಯಸಭಾ ಸದಸ್ಯ ನಟ, ಜಗ್ಗೇಶ್

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ‘ ಗುರುವೈಭವೋತ್ಸವ’ ವಿಜೃಂಭಣೆಯಿಂದ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ನಟಿ ರಚಿತಾ ರಾಮ್ ರಿಗೆ ಮಂತ್ರಾಲಯದಲ್ಲಿ ಗುರುವೈಭವೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಗ್ಗೇಶ್, ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲವನ್ನು ಕೊಡುತ್ತಾರೆ ಎಂದು ಹೇಳಿದ್ದಾರೆ.ಈ ತಿರುಕನ ಕನಸನ್ನು ರಾಯರು ನನಸು ಮಾಡಿದ್ದಾರೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿ, ಸಚಿವರಾದ ಶ್ರೀರಾಮುಲು, ಅಶ್ವಥ್ ನಾರಾಯಣ್ ಎಲ್ಲರಿಗೂ ಕೇಳಿದ್ದೆ. ಆದರೆ ಎಂಎಲ್‌ಸಿ ಆಗಲಿಲ್ಲ. ಆದರೆ ರಾಯರ ಇಚ್ಛೆ ಇತ್ತು ಏನೋ ಅಚ್ಚರಿ ರೂಪದಲ್ಲಿ ವಾಟ್ಸಪ್ ಕಾಲ್ ಬಂತು, ರಾಜ್ಯಸಭಾ ಸದಸ್ಯನಾದೆ , ಯಾವುದೇ ರಾಷ್ಟ್ರ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿಯನ್ನು ಮಂತ್ರಾಲಯದಲ್ಲಿ ಪಡೆದ ಅನುಭವವಾಗಿದೆ. ಇದು ಪ್ರಶಸ್ತಿಯಲ್ಲ, ರಾಯರ ಆಶೀರ್ವಾದ. . ನಾನು ಧನ್ಯನಾದೆ, ಪದವಿ ಮುಖ್ಯವಲ್ಲ. ಅದು ಬರುತ್ತದೆ, ಹೋಗುತ್ತದೆ ಆದರೆ ನಂಬಿಕೆ ಮುಖ್ಯ ಎಂದರು.

ಫೆಬ್ರವರಿ 21 ರಿಂದ 26ರ ವರೆಗೆ ಮಂತ್ರಾಲಯದಲ್ಲಿ ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ನಡೆಯುತ್ತಿದ್ದು, ರಾಜ್ಯದ ನಾನಾ ಮೂಲೆಗಳಿಂದ ಜನರು ಭಾಗವಹಿಸುತ್ತಿದ್ದಾರೆ.

Related Articles

- Advertisement -

Latest Articles