ಆನೇಕಲ್ : ಕಾವೇರಿ ನದಿ ವಿಚಾರವಾಗಿ ತಮಿಳು ನಾಡು ಸರ್ಕಾರದ ವಿರುದ್ಧ ಬಿಂದಿಗೆ ಹಿಡಿದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.


ನಗರದ ಅತ್ತಿಬೆಲೆ ಗಡಿಯಲ್ಲಿ ಕಾವೇರಿ ನಮ್ಮದು ಎಂದು ಘೋಷಣೆ ಕೂಗುತ್ತಾ ತಮಿಳುನಾಡು ಸರ್ಕಾರದ ವಿರುದ್ಧ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಸಮಿತಿ ದೆಹಲಿಯಲ್ಲಿ ಕುಳಿತು ಕಾವೇರಿ ನೀರು ಬಿಡುವಂತೆ ಆದೇಶ ಕೊಡುತ್ತದೆ. ಇವರು ಆದೇಶ ಕೊಟ್ಟ ತಕ್ಷಣ ನೀರು ಬಿಡೋದಕ್ಕೆ ಆಗಲ್ಲ ಏಕೆಂದರೆ ರಾಜ್ಯದಲ್ಲಿ ಕಣ್ಣೀರ ಪರಿಸ್ಥಿತಿ ನಿರ್ಮಾಣವಾಗಿದೆ, ಕುಡಿಯೋದಕ್ಕೆ ನೀರಿಲ್ಲ. ರಾಜ್ಯದ ರೈತರಿಗೂ ನೀರಿಲ್ಲ, ಮುಂದೆ ಬೆಂಗಳೂರಿಗೂ ಯಾವ ಕೆಲಸಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಆದ್ದರಿಂದ ಸರ್ಕಾರ ಯಾವ ಮುಲಾಜಿಗೂ ಒಗ್ಗದೆ ನೀರು ಬಿಡಬಾರದು ಎಂದು ಹೇಳಿದ್ದಾರೆ.


ಇದನ್ನೂ ಓದಿ : ಕುಮಾರಕೃಪಾದಲ್ಲಿರಲು ʼಚೈನ್ ಚೈತ್ರಾʼಗೆ ಯಾರ ಕೃಪೆ ಇತ್ತು?: ಕಾಂಗ್ರೆಸ್
ಕಾವೇರಿ ನೀರು ಬಿಡುವ ವಿಚಾರದಲ್ಲಿ ತಮಿಳುನಾಡು ಪದೆ ಪದೆ ಕಿರಿ ಕಿರಿ ಮಾಡುತ್ತಲೆ ಬಂದಿದೆ ಎಂದ ಅವರು, ಕರ್ನಾಟಕದ ಮೇಲೆ ದಾಳಿ ಮಾಡ್ತಾ ಇದ್ದಾರೆ, ಮೇಕೆದಾಟು ಯೋಜನೆಯ ಬಗ್ಗೆ ಕ್ಯಾತೆ ತೆಗೆಯುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಓಲೈಕೆ ಮಾಡುತಿದೆ ಎಂದು ಸಂಶಯ ಬರ್ತಾ ಇದೆ ಏಕೆಂದರೆ ಅವರೆಲ್ಲ ಇಂಡಿಯಾ ಒಕ್ಕೂಟದ ಸದಸ್ಯರಾಗಿದ್ದಾರೆ. ಇದರಿಂದ ರಾಜ್ಯಕ್ಕೆ ತೊಂದರೆ ಆಗಬಾರದು, ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.


ಇದನ್ನೂ ಓದಿ : ತಮಿಳುನಾಡಿಗೆ ಬಿಡಲು ನಮ್ಮಲ್ಲಿ ನೀರಿಲ್ಲ, ಪ್ರಧಾನಿಗೆ ಪತ್ರ ಬರೆಯುತ್ತೇವೆ : ಸಿಎಂ ಸಿದ್ದರಾಮಯ್ಯ
ತಮಿಳುನಾಡು ಸಿಎಂ ಸ್ಟಾಲಿನ್ ಫೋಟೋ ಹರಿದು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರ ಹಾಕಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.