ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಬಂದ್‌ಗೆ ಕರೆ ನೀಡಲಾಗಿದ್ದು, ಬುರ್ಖಾ ಧರಿಸಿ ವಾಟಳ್ ಪ್ರತಿಭಟಿಸಿದ್ದಾರೆ.
ಕಾವೇರಿ ನೀರಿಗಾಗಿ ಬುರ್ಖಾ ಧರಿಸಿ ತಲೆ ಮೇಲೆ ಬಿಂದಿಗೆ ಇಟ್ಟುಕೊಂಡು ಪ್ರತಿಭಟಿಸಿದ್ದಾರೆ. ನಿಮಗೆ ಮನವಿ ಮಾಡಲು ಬಂದಿದ್ದೆವು ಆದರೆ ನಮ್ಮ ಕರೆಯಲು ನೀವು ಸಿದ್ದರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಚಿವರೆಲ್ಲ ಪಾಳೇಗಾರರಲ್ಲ, ಬಂದ್‌ಗೆ ಅವಕಾಶವಿಲ್ಲ ಎಂದಿದ್ದಾರೆ. ಮಾನ್ಯ ಗೃಹ ಮಂತ್ರಿಯವರೇ ನೀವು ಯಾವತ್ತು ಹೋರಾಟ ಮಾಡಿದ್ದೀರಿ ಹೇಳಿ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಂದ್‌ಗೆ ಕೆಲವೆಡೆ ನೀರಸ ಪ್ರತಿಕ್ರಿಯೆ : ವ್ಯಾಪಾರ ವಹಿವಾಟು, ಬಸ್ ಸಂಚಾರ ಆರಂಭ
ಒಂದು ಕಡೆ ಪರಮೇಶ್ವರ್, ಪರಮೇಶ್ವರನ ಮಗ ಶಿವಕುಮಾರ್ ನಮಗೆ ದಾರಿ ತೋರಲಿಲ್ಲ, ಕನಿಷ್ಟ ಸಿದ್ದರಾಮೇಶ್ವರನೂ ದಾರಿ ತೋರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮೇಶ್ವರ ನಿನ್ನ ಎಷ್ಟು ಬಾರಿ ನನೆಸಿಕೊಳ್ತೀವಿ ನಿನ್ನ ಕಣ್ಣಿಗೆ ನಾವು ಬೀಳಲಿಲ್ಲವೇ. ಎಲ್ಲೆಂದರಲ್ಲಿ ಹೋರಾಟಗಾರರ ಬಂಧನ ಮಾಡುತ್ತಿದ್ದಾರೆ. ತಮಿಳುನಾಡಲ್ಲಿ ಪೊಲೀಸರೇ ರಸ್ತೆ ತಡೆದಿದ್ದಾರೆ. ಇಲ್ಲಿ ನಮ್ಮ ಪೊಲೀಸರು ನಮ್ಮನ್ನು ಬಂಧಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.