Sunday, October 1, 2023
spot_img
- Advertisement -spot_img

ಮುಂದಿನ ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ಇಳಿಕೆ : ಶಕ್ತಿಕಾಂತ್ ದಾಸ್

ನವದೆಹಲಿ : ಭಾರತದಲ್ಲಿ ಪ್ರಮುಖವಾಗಿ ಹಣದುಬ್ಬರವು ಹೆಚ್ಚಾಗಿದ್ದರೂ, ತಾಜಾ ಬೆಳೆಗಳನ್ನು ಬೆಳೆಯುವುದರಿಂದ ಮುಂದಿನ ತಿಂಗಳು ತರಕಾರಿಗಳ ಬೆಲೆಯಲ್ಲಿ ಕಡಿಮೆಯಾಗಬಹುದು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸೆಪ್ಟೆಂಬರ್‌ನಿಂದ ತರಕಾರಿಯ ಹಣದುಬ್ಬರ ಕುಸಿತಕ್ಕೆ ಕಾರಣವಾಗಿ ಮಾರುಕಟ್ಟೆಯಲ್ಲಿ ಅವುಗಳ ಬೆಲೆಯಲ್ಲಿ ಇಳಿತ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ತಯಾರಿಕಾ ಘಟಕ ಹೆಚ್ಚಿಸಲು ಆಪಲ್ ಸಜ್ಜು; ಅಧಿಕಾರಿಗಳೊಂದಿಗೆ ಸಭೆ!

ಮುಖ್ಯವಾಗಿ ಟೊಮೆಟೊದ ಪೊರೈಕೆಯಲ್ಲಿ ಹೆಚ್ಚಳ ಕಂಡ ಹಿನ್ನೆಲೆಯಲ್ಲಿಯೂ ಬೆಲೆಯಲ್ಲಿ ಇಳಿಮುಖವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿಸಿದ್ದಾರೆ.

ಜುಲೈನಲ್ಲಿ ಆಗಿದ್ದ ತರಕಾರಿ ಬೆಲೆಗಳ ಏರಿಕೆಯನ್ನು ಟೊಮೆಟೊ ಬೆಲೆಯ ಹಾಗೆಯೇ ನೋಡಲಾಗುತ್ತಿತ್ತು. ಆದರೆ ಮಂಡಿಗಳಲ್ಲಿ ಟೊಮೆಟೊಗಳ ಪೊರೈಕೆಯಲ್ಲಿ ಏರಿಕೆ ಕಂಡ ಕಾರಣಕ್ಕೆ ಈಗಾಗಲೇ ಟೊಮೆಟೊ ಕೈಗೆಟುಕುವ ದರದಲ್ಲಿ ದೊರೆಯುತ್ತಿವೆ ಎಂದು ತಿಳಿಸಿದ್ದಾರೆ.

ಈರುಳ್ಳಿಯ ವಿಚಾರದಲ್ಲಿಯೂ ಸಹ ಮೊದಲಿನ ಪೂರೈಕೆ ಹಾಗೂ ನಿರ್ವಹಣೆಯೊಂದಿಗೆ ಮುಂದಿನ ತಿಂಗಳಿನಿಂದ ತರಕಾರಿ ಹಣದುಬ್ಬರದಲ್ಲಿ ಗಮನಾರ್ಹವಾದ ನಿಧಾನಗತಿಯನ್ನು ನಾವು ನಿರೀಕ್ಷಿಸುತ್ತೇವೆ. ಎಂದು ದಾಸ್ ಅವರು 29 ನೇ ಲಲಿತ್ ದೋಷಿ ಸ್ಮಾರಕ ಉಪನ್ಯಾಸವನ್ನು ನೀಡುತ್ತಾ ಹೇಳಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles