ವಿಜಯಪುರ: ವಿಜಯಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರಿಗೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಮುಂದಿನ ಎಲೆಕ್ಷನ್ ನಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ಟಿಕೆಟ್ ನೀಡಬೇಡಿ ಎಂದು ವಿವಿಧ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ದುಡಿದಿದ್ದಾರೆ. ಕಾರ್ಯಕರ್ತರ ಶಕ್ತಿ ಪಟ್ಟಣಶೆಟ್ಟಿ ಶಕ್ತಿಯಾಗಿದೆ. ಅಪ್ಪಾಸಾಹೇಬ ಪಟ್ಟಣಶೆಟ್ಟಿ ಗೆಲ್ಲಿಸಿ ಕೊಡುವುದು ನಮ್ಮ ಜವಾಬ್ದಾರಿ.
ಹಾಲಿ ಶಾಸಕ ಯತ್ನಾಳರಿಗೆ ಟಿಕೆಟ್ ನೀಡಿದರೆ ನಾವು ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಯತ್ನಾಳ ಕಾರ್ಯಕರ್ತರೊಂದಿಗೆ ಬೆರೆಯುವುದಿಲ್ಲ,” ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಕಳೆದ ಬಾರಿ ಟಿಕೆಟ್ ನೀಡದಿದ್ದರೂ ಪಕ್ಷ ಬಿಡದೇ ಪಕ್ಷನಿಷ್ಠೆ ತೋರಿದ್ದಾರೆ.
ಭ್ರಷ್ಟಾಚಾರ ಮಾಡಿಲ್ಲ, ವಿಜಯಪುರ ನಗರ ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ಯತ್ನಾಳ ಪದೇ ಪದೇ ಹೇಳುತ್ತಾರೆ. ಆದರೆ ಅವರ ಪಿಎಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅದಕ್ಕೆ ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.