ಬೆಂಗಳೂರು: ವಿಜಯ ಸಂಕಲ್ಪ ಅಭಿಯಾನದಲ್ಲಿ 38 ಸಾವಿರಕ್ಕೂ ಹೆಚ್ಚು ಬೂತ್ ಸಂಪರ್ಕ ಮಾಡಲಾಗಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಅಭಿಯಾನದಲ್ಲಿ 38,272 ಬೂತ್ಗಳ ವ್ಯಾಪ್ತಿಯಲ್ಲಿ 21.01 ಲಕ್ಷ ಮನೆಗಳ ಸಂಪರ್ಕಿಸಲಾಗಿದೆ. 12.37 ಲಕ್ಷ ಮನೆಗಳು ಮತ್ತು 4.55 ಲಕ್ಷ ವಾಹನಗಳ ಮೇಲೆ ಬಿಜೆಪಿ ಸ್ಟಿಕ್ಕರ್ ಅಂಟಿಸಲಾಗಿದೆ. 1.88 ಲಕ್ಷಕ್ಕೂ ಹೆಚ್ಚು ಗೋಡೆ ಬರಹ ಬರೆಯಲಾಗಿದೆ . 14,500 ಡಿಜಿಟಲ್ ಪೇಟಿಂಗ್ಗಳನ್ನು ಮೂಡಿಸಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಗಳ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಸದಸ್ಯರಾಗಿ ಮಾಡಿಕೊಳ್ಳಲು ಗಮನ ಹರಿಸಲಾಗಿದೆ ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಚುನಾವಣೆ ಗೆಲ್ಲುವ ರೂಟ್‌ಮ್ಯಾಪ್ ಹಾಗೂ ಸಿದ್ಧತೆ ಬಗ್ಗೆ ಚರ್ಚೆಯಾಗಿದೆ.
ಫೆಬ್ರವರಿ 20ರ ಬಳಿಕ ನಾವು 4 ತಂಡಗಳಾಗಿ ರಥಯಾತ್ರೆ ತೆರಳುತ್ತೇವೆ. ತಂಡದಲ್ಲಿ ಯಾರಿರುತ್ತಾರೆ ತೀರ್ಮಾನಿಸುತ್ತೇವೆ,ಎರಡು ತಿಂಗಳ ಚುನಾವಣಾ ಕಾರ್ಯ ಯೋಜನೆ ಬಗ್ಗೆ ಚರ್ಚೆ ನಡೆದಿದೆ ಎಂದರು.