ಹಾಸನ: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಂದಾಗಿರುವುದು ನಮಗೆ ಆಶಾದಾಯಕವಾಗಿದೆ. ಎರಡು ಪಕ್ಷಗಳು ಒಂದಾಗಿರುವುದರಿಂದ ಜಾತ್ಯತೀತ ಮತಗಳು ನಮಗೆ ಬರುತ್ತವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವುದರಿಂದ ಈ ಬಾರಿಯ ಲೋಕಸಭೆಗೆ ಯಾವುದೇ ರೀತಿ ಅನಾನುಕೂಲ ಆಗುವುದಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ವಂಚನೆ ಕೇಸ್; ಯುವತಿ ವಿರುದ್ಧ ಪ್ರತಿ ದೂರು ಕೊಟ್ಟ ಸಂಸದರ ಪುತ್ರ
ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಅಲ್ಲಗಳೆಯಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರುಗಳ ನಾಯಕತ್ವ ಮುಂಬರುವ ಚುನಾವಣೆ ಮೇಲೆ ನೆರವಾಗಲಿವೆ. ಸುಮಾರು 20 ಸೀಟ್ ಗಿಂತಲೂ ಮೇಲೆ ನಾವು ಗೆಲ್ಲಲಿದ್ದೇವೆ ಎಂದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಸ್ಕೂಲ್ ಬಿಲ್ಡಿಂಗ್ ವಿಚಾರವನ್ನು ತನ್ನ ತಂದೆ ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ಫೋನ್ ನಲ್ಲಿ ಕೇಳಿದ್ದಾರೆ. ತಮಗೆ ಯಾವುದು ಇಷ್ಟಾನೋ ಅದನ್ನೇ ಮಾಡಪ್ಪ ಎಂದು ಕೂಡ ಹೇಳಿದ್ದಾರೆ. ಆದರೆ ಇದರ ಬಗ್ಗೆ ಸಾಕಷ್ಟು ಸುಳ್ಳು ಸುದ್ಧಿ ಹಬ್ಬಿಸಲಾಯಿತು. ಈ ವಿಡಿಯೋ ಪ್ರಕರಣ ನಿಜವಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಸಿದ್ಧರಾಮಯ್ಯ ನವರು ಹೇಳಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣಭೈರೇಗೌಡ
ಈ ವಿಡಿಯೋ ಪ್ರಕರಣದಲ್ಲಿ ಯತೀಂದ್ರ ಅವರು ಅಧಿಕಾರಿಗಳ ವರ್ಗಾವಣೆ ವಿಚಾರವಾಗಿಯೇ ಮಾತನಾಡಿದ್ದರು, ಈ ಹಿಂದೆ ಇದ್ದ ಮುಖ್ಯಮಂತ್ರಿಗಳ ಮಕ್ಕಳು ಈ ಕೆಲಸವನ್ನು ಮಾಡಿಲ್ವಾ? ಸಿದ್ದರಾಮಯ್ಯ ಅವರನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.