Friday, March 24, 2023
spot_img
- Advertisement -spot_img

ಉಭಯ ದೇಶಗಳು ತಮ್ಮ ವಿಶೇಷ ಸವಲತ್ತುಗಳ ಅಭಿವೃದ್ಧಿಗೆ ಶ್ರಮಿಸಲಿದೆ : ವ್ಲಾಡಿಮೀರ್ ಪುಟೀನ್

ಮಾಸ್ಕೋ: ಎಸ್‌ಸಿಒ ಮತ್ತು ಜಿ20 ಅಧ್ಯಕ್ಷತೆ ಏಷ್ಯಾ ಮತ್ತು ಇಡೀ ಜಗತ್ತಿನಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಬಲಪಡಿಸುವ ಹಿತಾಸಕ್ತಿಗಳಲ್ಲಿ ನಮ್ಮ ಜನರ ಅನುಕೂಲಕ್ಕಾಗಿ ಬಹು-ಆಯಾಮದ ರಷ್ಯಾ-ಭಾರತ ಸಹಕಾರವನ್ನು ನಿರ್ಮಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಪುಟಿನ್ ಹೇಳಿದ್ದಾರೆ.

ಹೊಸ ವರ್ಷಕ್ಕೆ ಪ್ರಧಾನಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಂದೇಶ ಕಳುಹಿಸಿರುವ ಪುಟಿನ್, 2022 ರಲ್ಲಿ ರಷ್ಯಾ ಮತ್ತು ಭಾರತ ತಮ್ಮ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿವೆ ಮತ್ತು ಸ್ನೇಹ ಹಾಗೂ ಪರಸ್ಪರ ಗೌರವದ ಸಕಾರಾತ್ಮಕ ಸಂಪ್ರದಾಯಗಳನ್ನು ಆಧಾರವಾಗಿಸಿಕೊಂಡು, ಉಭಯ ದೇಶಗಳು ತಮ್ಮ ವಿಶೇಷ ಸವಲತ್ತುಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲಿವೆ ಎಂದು ಹೇಳಿದ್ದಾರೆ.

ಕಾರ್ಯತಂತ್ರ ಸಹಭಾಗಿತ್ವ, ಶಕ್ತಿ, ಮಿಲಿಟರಿ ತಂತ್ರಜ್ಞಾನ ಮತ್ತು ಸಹಕಾರ ಮತ್ತು ಇತರ ಕ್ಷೇತ್ರಗಳ ಜೊತೆಗೆ ದೊಡ್ಡ ಪ್ರಮಾಣದ ವ್ಯಾಪಾರ ಮತ್ತು ಆರ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡು, ಪ್ರಾದೇಶಿಕ ಮತ್ತು ಜಾಗತಿಕ ಕಾರ್ಯಸೂಚಿಗಳ ಪ್ರಮುಖ ವಿಷಯಗಳನ್ನು ಪರಿಹರಿಸುವ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ತಮ್ಮ ಹೇಳಿಕೆಯಲ್ಲಿ ಪುಟಿನ್ ತಿಳಿಸಿದ್ದಾರೆ.

ನಿಜಕ್ಕೂ ಒಂದು ಅದ್ಭುತ ವರ್ಷ, ಮುಂದಿನ ವರ್ಷ ಇದು ಮತ್ತಷ್ಟು ಉತ್ತಮಗೊಳ್ಳಲಿದೆ. ಇಂಡಿಯ ಜಿ20ಯ ಅಧ್ಯಕ್ಷತೆ ವಹಿಸಿಕೊಂಡಿರುವುದು ಸಹ ಬಹಳ ಮಹತ್ವದ ಅಂಶ,’ ಎಂದು ಎಲ್ಲಿಸ್ ತಮ್ಮ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.‘ಈ ಪಯಣ ಇನ್ನೂ ಕೊನೆಗೊಂಡಿಲ್ಲ ಮತ್ತು ಪ್ರತಿಯೊಬ್ಬ ಇಂಡಿಯನ್ ಗೆ ಹೊಸ ವರ್ಷಸ ಶುಭಾಷಯಗಳನ್ನು ಹೇಳುತ್ತೇನೆ,’ ಎಂದು ಹೇಳುತ್ತಾ ಎಲ್ಲಿಸ್ ತಮ್ಮ ವಿಡಿಯೋ ಸಂದೇಶ ಕೊನೆಗೊಳಿಸಿದ್ದಾರೆ.

Related Articles

- Advertisement -

Latest Articles