ಬಿಹಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರದಿದ್ದರೆ ಗಡಿಗೆ ಸಮೀಪವಿರುವ ಬಿಹಾರದ ಪ್ರದೇಶಗಳು ‘ನುಸುಳುಕೋರರಿಂದ ತುಂಬಿಕೊಳ್ಳಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಗರದ ಝಂಜರ್‌ಪುರ ಸಂಸದೀಯ ಕ್ಷೇತ್ರದಲ್ಲಿ ನಡೆದ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಿದ ಅಮಿತ್ ಶಾ, ಬಿಹಾರದಲ್ಲಿ ಲಾಲು-ನಿತೀಶ್ ಜೋಡಿ ಮತ್ತೆ ಅಧಿಕಾರಕ್ಕೆ ಬಂದರೆ ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಿ ಹಿಂತಿರುಗದಿದ್ದರೆ, ಇಡೀ ಪ್ರದೇಶದ ಗಡಿಯಲ್ಲಿ ನುಸುಳುಕೋರರು ತುಂಬಿಳ್ಳುತ್ತಾರೆ ಎಂದರು.
ಇದನ್ನೂ ಓದಿ: INDIA ಒಕ್ಕೂಟದ ಮೊದಲ ರ‍್ಯಾಲಿ ರದ್ದು!
ಇಂತಹ ಪರಿಸ್ಥಿತಿಯಲ್ಲಿ ಬಿಹಾರದಲ್ಲಿ ಹಲವು ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಈ ಪ್ರದೇಶವು ನುಸುಳುಕೋರರಿಂದ ತುಂಬಿರಬೇಕೆಂದು ನೀವು ಬಯಸುತ್ತೀರಾ? 2024ರ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ಯುಪಿಎ ತನ್ನ ಹೆಸರನ್ನು ತೆಗೆದು INDIA ಎಂದು ಇಟ್ಟುಕೊಂಡಿದೆ. ಏಕೆಂದರೆ ಯುಪಿಎ ಹೆಸರಲ್ಲಿ 12 ಲಕ್ಷ ಕೋಟಿ ಹಗರಣಗಳಿವೆ. ಕೆಲವು ಹಗರಣಗಳಲ್ಲಿ ಆಗ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಭಾಗಿಯಾಗಿದ್ದಾರೆ, ನಿತೀಶ್ ಕುಮಾರ್ ಈಗ ಪ್ರಧಾನಿ ಅಭ್ಯರ್ಥಿ ಎಂದು ತಿಳಿದು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಾಕ್ ಸ್ವಾತಂತ್ರ್ಯವು ದ್ವೇಷ ಭಾಷಣವಾಗಿ ಬದಲಾಗಬಾರದು; ಮದ್ರಾಸ್ ಹೈಕೋರ್ಟ್
ಬಿಹಾರ, ಅದರಲ್ಲೂ ವಿಶೇಷವಾಗಿ ಮಿಥಿಲಾ ಪ್ರದೇಶವು ಪ್ರವಾಹ ಮತ್ತು ಅರಾಜಕತೆ (ಜಂಗಲ್ ರಾಜ್) ಅಡಿ ತತ್ತರಿಸುತ್ತಿದ್ದರೂ ನಿತೀಶ್ ಕುಮಾರ್ ಸರ್ಕಾರವು ಗಾಢ ನಿದ್ರೆಯಲ್ಲಿದೆ. ಆದರೆ ಮೋದಿ ಸರ್ಕಾರವು ವಿವಿಧ ಯೋಜನೆಗಳಿಗೆ ಇದುವರೆಗೆ 5.92 ಲಕ್ಷ ಕೋಟಿ ರೂಪಾಯಿಗಳನ್ನು ನೀಡಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.