ಬೆಂಗಳೂರು : ದಲಿತ ಮಹಿಳೆ ಮೇಲೆ ಹಲ್ಲೆ ಮಾಡಿರುವ ಸಚಿವ ಸೋಮಣ್ಣ ರನ್ನು ವಜಾಗೊಳಿಸಿ ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟಿಸಿದರು.
ಹಲ್ಲೆ ವಿಚಾರ ಪುಷ್ಪಾ ಅಮರ್ ನಾಥ್ ಮಾತನಾಡಿ, ನಾವಷ್ಟೇ ಅಲ್ಲ, ಶೋಭಾಕ್ಕ, ಶಶಿಕಲಾ ಜೊಲ್ಲೆ, ಮಾಳವೀಕಾ ಅಕ್ಕ ಎಲ್ಲರೂ ಹೊರಗೆ ಬನ್ನಿ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ, ನಿಮಗೆ ನಾಚಿಕೆ ಇದ್ಯಾ? ಮಾನ ಮರ್ಯಾದೆ ಇದ್ಯಾ ಯಾಕೆ ಬಾಯಿ ಮುಚ್ಚಿ ಕುಳಿತಿದ್ದೀರಿ ? ಮಹಿಳೆಯರ ಮೇಲೆ ದೌರ್ಜನ್ಯ ಮಾಡಬಹುದಾ ? ನಿಮಗೆ ಮಾನ ಮರ್ಯಾದೆ ಇದ್ದರೆ ಸೋಮಣ್ಣನವರ ರಾಜೀನಾಮೆ ಪಡೆಯಿರಿ, ನಾವು ಮಹಿಳಾ ಯೋಗಕ್ಕೆ ದೂರು ಕೊಡ್ತೇವೆ ಪೊಲೀಸ್ ಸಿಬ್ಬಂದಿ ಎದುರೇ ಕಪಾಳಕ್ಕೆ ಹೊಡೆದಿದ್ದಾರೆ ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದೀಪಾವಳಿ ಹಬ್ಬದ ಆಚರಣೆ ಇದೆ, ಸೋಮಣ್ಣನವರಿಂದ ಇಂಥ ಆಚರಣೆ ನಿರೀಕ್ಷಿಸಿರಲಿಲ್ಲ, ಇದು ಬಿಜೆಪಿ ನಡೆ ಇವ್ರು ಮಹಿಳೆಯರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು.ಅಷ್ಟೇ ಅಲ್ಲದೇ ಮಹಿಳಾ ಕಾಂಗ್ರೆಸ್ ಪ್ರತಿಭಟನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸಿದರು. ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ, ಸಿಎಂ ಕೂಡಲೇ ಸೋಮಣ್ಣರನ್ನು ವಜಾಗೊಳಿಸಬೇಕು, ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಸರ್ಕಾರ ದಲಿತ ವಿರೋಧಿ ಅನ್ನೋದು ಸಾಬೀತಾಗಿದೆ ಎಂದು ಆಕ್ರೋಶಿಸಿದರು. ತನ್ನ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ವಸತಿ ಸಚಿವ ವಿ ಸೋಮಣ್ಣ ಕಪಾಳಮೋಕ್ಷ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿತ್ತು.
ನನಗೂ ಹೆಣ್ಣು ಮಕ್ಕಳ ಮೇಲೆ ಗೌರವವಿದೆ, ಅಮ್ಮಾ ತಾಯಿ ಎಂದೇ ಕರೆಯುತ್ತೇನೆ, ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ, ಯಾರಿಗಾದೂ ನೋವಾಗಿದ್ದರೆ ಕ್ಷಮೆಯಾಚಿಸ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದರು.