ಹೈದ್ರಾಬಾದ್: ಹೈದರಾಬಾದ್‌ಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಭಾರತ್ ರಾಷ್ಟ್ರ ಸಮಿತಿ ಪಕ್ಷವು ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಮೂಲಕ ಸ್ವಾಗತ ಕೋರಿದೆ. ಈ ಪೋಸ್ಟರ್‌ನಲ್ಲಿ ಬಿಜೆಪಿ ನಾಯಕರ ಫೋಟೋಗಳನ್ನು ಹಾಕಲಾಗಿದೆ.
ಸಿಐಎಸ್ಎಫ್ ರೈಸಿಂಗ್ ಡೇ ಪರೇಡ್ ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದು, ನಿರ್ಮಾ ಜಾಹಿರಾತಿನ ಪೋಸ್ಟರ್ ನಲ್ಲಿ ಬಿಜೆಪಿ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಫೋಟೋಗಳು ಕಂಡುಬಂದಿದ್ದು ಅಚ್ಚರಿ ಮೂಡಿಸಿದೆ.
ಬಿಜೆಪಿ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ, ಸುಜನ ಚೌಧರಿ, ವಿರೂಪಾಕ್ಷಪ್ಪ, ಜ್ಯೋತಿರಾದಿತ್ಯ ಸಿಂಧಿಯಾ, ಅರ್ಜುನ್ ಕೋತ್ಕರ್ ಮುಂತಾದವರ ಫೋಟೋಗಳನ್ನು ಬಾಲಕಿಯರ ಫೋಟೋಕ್ಕೆ ಜೋಡಿಸಲಾಗಿದೆ. ಕೆಳಗಡೆ ಅಮಿತ್ ಶಾ ಅವರಿಗೆ ಸ್ವಾಗತ ಎಂದು ಬರೆಯಲಾಗಿದೆ.
ಈ ನಾಯಕರೆಲ್ಲರೂ ಭ್ರಷ್ಟಾಚಾರ ಆರೋಪಿಗಳಾಗಿದ್ದು, ಬಿಜೆಪಿಗೆ ಸೇರ್ಪಡೆಯಾದ ಬಳಿಕ ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂಬುದನ್ನು ಪರೋಕ್ಷವಾಗಿ ಬಿಆರ್‌ಎಸ್ ಪಕ್ಷ ಈ ಪೋಸ್ಟರ್ ಮೂಲಕ ಹೇಳಿದೆ.