ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಗಾಲ್ಫ್ ಆಟ ಆಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಇಬ್ಬರು ಯುಎಸ್ಎನಲ್ಲಿ ನಡೆದ ಗಾಲ್ಫ್ ಪಂದ್ಯದ ಸ್ಪೋರ್ಟ್ಸ್ ಸಂವಾದದಲ್ಲಿ ಭಾಗವಹಿಸಿದ್ದರು. ಸೌಹಾರ್ದ ಪಂದ್ಯದಲ್ಲಿ ಇಬ್ಬರೂ ಪರಸ್ಪರ ಪೈಪೋಟಿಯಲ್ಲಿ ಪಂದ್ಯ ಆಡುತ್ತಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ : Narendra Modi : 15 ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಪಿಎಂ ಮೋದಿ
ಎಂಎಸ್ ಧೋನಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಸೌಹಾರ್ದ ಪಂದ್ಯದ ಒಂದು ಫೋಟೋವನ್ನು ದುಬೈ ಮೂಲದ ಉದ್ಯಮಿ ಹಿತೇಶ್ ಸಾಂಘ್ವಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಶೇರ್ ಮಾಡಿಕೊಂಡು “ಗಾಲ್ಫ್ ವಿತ್ ಎಂಎಸ್ ಧೋನಿ, ಡೊನಾಲ್ಡ್ ಟ್ರಂಪ್ ಮತ್ತು ರಾಜೀವ್ ಕೆನಾಕ್.. ನಮ್ಮ ಆತಿಥ್ಯ ವಹಿಸಿದ್ದಕ್ಕಾಗಿ ಅಧ್ಯಕ್ಷರೇ ಧನ್ಯವಾದಗಳು” ಎಂದು ಹಿತೇಶ್ ಶೀರ್ಷಿಕೆ ಬರೆದುಕೊಂಡಿದ್ದಾರೆ.


ಫೋಟೋದಲ್ಲಿ ಎಂಎಸ್ ಧೋನಿ ಉದ್ದ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್ ಅವರು ತಮ್ಮ ಪರಿಚಿತ ಮ್ಯಾಗ ಕ್ಯಾಪ್ ಧರಿಸಿದ್ದಾರೆ. ಇವರಿಬ್ಬರ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ತಮ್ಮ ಸಾರ್ವಕಾಲಿಕ ನೆಚ್ಚಿನ ಎಂಎಸ್ ಧೋನಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಗಾಲ್ಫ್ ಆಡುವುದನ್ನು ನೀಡಿದ ನೆಟ್ಟಿಗರು, ವಿಶೇಷ ಕಾಮೆಂಟ್‌ಗಳು ಮತ್ತು ತಮಾಷೆಯ ಮಿಮ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : G20 Summit 2023 : ಸ್ಪೇನ್ ಅಧ್ಯಕ್ಷಗೆ ಕೊರೊನಾ ಪಾಸಿಟಿವ್, ಜಿ20 ಶೃಂಗಸಭೆಗೆ ಗೈರು!
ಬಳಕೆದಾರರಲ್ಲಿ ಒಬ್ಬರು, ‘ಎಂಎಸ್ ಧೋನಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಗಾಲ್ಫ್ ಆಡುತ್ತಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ‘ಧೋನಿಯ ಕ್ರೇಜ್ ದೊಡ್ಡದಿದೆ’ ಎಂದು ಬರೆದುಕೊಂಡಿದ್ದಾರೆ.
“ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಎಸ್ ಧೋನಿಗಾಗಿ ಗಾಲ್ಫ್ ಆಟವನ್ನು ಆಯೋಜಿಸಿದ್ದರು. – ಯುಎಸ್ಎ ನ ಥಾಲಾ ಫೇವರ್ ಎಂಬಲ್ಲಿ ಆಯೋಜಿಸಿದ್ದರು..!!!”
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.