ಮೈಸೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ, ವಿಪಕ್ಷ ಎರಡು ರಾಜಕೀಯ ಮಾಡುತ್ತಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
ತಮಿಳುನಾಡಿಗೆ ಕಾವೇರಿ ಬಿಡೋ ವಿಚಾರವಾಗಿ ನಗರದ ಹರ್ಡಿಂಗ್ ಸರ್ಕಲ್ ಬಳಿ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶಿಸಿದರು. ರಾಜ್ಯದ ಹಿತಕ್ಕಾಗಿ ಇಬ್ಬರು ಒಟ್ಟಿಗೆ ಹೋರಾಟ ಮಾಡುತ್ತಿಲ್ಲ, ಸರ್ಕಾರ ಹಾಗೂ ವಿಪಕ್ಷಗಳು ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಮಾತನಾಡು ತ್ತಿದ್ದಾರೆ, ರಾಜ್ಯದ ಹಿತ ದೃಷ್ಟಯಿಂದ ಒಳ್ಳೆಯ ಬೆಳವಣಿಗೆಯಲ್ಲ, ತುರ್ತು ಸಭೆ ಕರೆದಾಗ ವಿಪಕ್ಷದ ನಾಯಕರು ಹೋಗಲಿಲ್ಲ , ಬಿಜೆಪಿಯವರು ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಹಾಗೂ ಸ್ಟಾಲಿನ್ ವಿರುದ್ಧ ಪ್ರತಿಭಟನಾಕರರು ಘೋಷಣೆ ಕೂಗಿದರು.
ಕಾಂಗ್ರೆಸ್ ನವರು ಪಾಳೇಗಾರಿಕೆ ಮಾಡುತ್ತಿದ್ದಾರೆ, ನೀರು ಬಿಡುವ ಇಂತಹ ಪಾಳೆಯಗಾರರನ್ನು ನಾನು ಹಿಂದೆ ನೋಡಿಲ್ಲ , ನೀರು ಬಿಡಬೇಕಾಗತ್ತೆ ಬಿಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳ್ತಾರೆ, ಇಂತಹ ಹೇಳಿಕೆಯಿಂದ ನನಗೆ ನೋವಾಗಿದೆ ಎಂದು ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದರು.
ಬೆಂಗಳೂರು ಜನಕ್ಕೆ ಕುಡಿಯಲು ನೀರಿಲ್ಲ, ಇನ್ನೊಂದು ವಾರ ಆದ್ರೆ ಯಾವ್ದಕ್ಕೂ ನೀರೇ ಇರಲ್ಲ, ಬೆಂಗಳೂರು ಜನಕ್ಕೆ ಅರ್ಥ ಆಗ್ತಿಲ್ಲ , ಸಂಪೂರ್ಣ ನೀರು ನಿಂತ ಮೇಲೆ ಅರ್ಥ ಆಗತ್ತೆ ಅನ್ಸತ್ತೆ ಎಂದು ಹೋರಾಟಕ್ಕೆ ಇಳಿಯದ ಬೆಂಗಳೂರು ಜನರ ವಿರುದ್ಧ ಕೆಂಡಕಾರಿದ್ದಾರೆ.
ಇದನ್ನೂ ಓದಿ : ಚೈತ್ರಾ ಕುಂದಾಪುರ ವಂಚನೆ ಕೇಸ್; ಕುಂದಾಪುರ- ಬ್ರಹ್ಮಾವರದಲ್ಲಿ ಸ್ಥಳ ಮಹಜರ್
ತಮಿಳರು ಇಲ್ಲಿ ಇರಬಾರದು ಇವ್ರಿಗೆ ಎಲ್ಲಿಂದ ನೀರು ಕೊಡೋಣ? 19 ನೇ ತಾರೀಖು ನಿಮ್ಮ ರೈತರು ಚಳುವಳಿಗೆ ಇಳಿಯುತ್ತಿದ್ದಾರೆ, ಸ್ಟಾಲಿನ್‌ವ್ರೆ ಮುಂದಿನ ದಿನಗಳಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಸ್ಟಾಲಿನ್ ವಿರುದ್ಧ ಕರ್ನಾಟಕದ್ಯಾಂತ ಹೋರಾಟ ಮಾಡ್ಬೇಕಾಗತ್ತೆ, ರಾಜ್ಯ ಬಂದ್‌ಗೂ ಕರೆ ಕೊಡ್ತೀವಿ, ತಮಿಳು ಗಡಿ ಬಂದ್ ಮಾಡ್ತೀವಿ, ತಮಿಳು ಬಸ್, ತಮಿಳು ಚಿತ್ರ ಎಲ್ಲವನ್ನೂ ಬಂದ್ ಮಾಡ್ತೀವಿ ಎಂದು ಸ್ಟಾಲಿನ್ ಸರ್ಕಾರಕ್ಕೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : ‘ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ’
ಈ ಹಿಂದೆ ಯಡಿಯೂರಪ್ಪ ತಮಿಳರಿಗೋಸ್ಕರ ತಿರುವಳ್ಳುವರ್ ಪ್ರತಿಮೆ ನಿರ್ಮಾಣ ಮಾಡಿದ್ರು
ಬೊಮ್ಮಾಯಿ ವಿಧಾನಸೌಧಕ್ಕೆ ಕನ್ನಡ ವಿರೋಧಿ ರಜನಿಕಾಂತ್ ಕರೆಸಿ ಸಮಾರಂಭ ಮಾಡಿದ್ರು , ಈಗ ರಜನಿಕಾಂತ್ ಗೆ ನಿಜವಾಗಲೂ ಎದೆಗಾರಿಕೆ ಇದ್ರೆ, ಪ್ರಾಮಾಣಿಕತೆ ಇದ್ರೆ ಧೈರ್ಯ ಇದ್ರೆ ಸ್ಟಾಲಿನ್ ನಿರ್ಧಾರವನ್ನು ಖಂಡಿಸಬೇಕು, ಕಮಲ್ ಹಾಸನ್ ಕೂಡ ಈ ನಿರ್ಧಾರವನ್ನು ಖಂಡಿಸಬೇಕು , ಕರ್ನಾಟಕದ ಪರ ನಿಲ್ಲಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಹೋರಾಟ ಮಾಡುತ್ತೇವೆ ಎಂದು ಹರಿಹಾಯ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.