ತುಮಕೂರು : ಮಾದಿಗ ಸಮಾಜದವರ ಬೇಡಿಕೆಯಾದ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ ಎಂದು ಕೆ.ಹೆಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ ಚಿತ್ರದುರ್ಗದಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ಪರಮೇಶ್ವರ್ ಆದಿಯಾಗಿ ಎಲ್ಲರೂ ಘೋಷಣೆ ಮಾಡಿದ್ದಾರೆ, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ, ರಾಜಣ್ಣ, ಪರಮೇಶ್ವರ್ ನಾಯ್ಕ್, ಮಹದೇವಪ್ಪ, ಭೀಮಾನಾಯ್ಕ್ ಒಳಮೀಸಲಾತಿಯನ್ನು ಒಪ್ಪಿಕೊಂಡಿದ್ದೇವೆ, ಈಗಾಗಲೇ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿ ಯವರು ಹೇಳಿದ್ದಾರೆ, ಕ್ಯಾಬಿನೇಟ್ ತರ್ಬೇಕು, ಮುಂದಿನ ಅಸೆಂಬ್ಲಿ ವೇಳೆಗೆ ಅದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗ್ತದೆ ಎಂದರು.
ಇದನ್ನೂ ಓದಿ: ಮುಸ್ಲಿಮರ ಪರ ಯಾವಾಗಲೂ ಧ್ವನಿ ಎತ್ತುತ್ತೇನೆ; ಹೆಚ್‌ಡಿಕೆ
ನಾವು ನುಡಿದಂತೆ ನಡೆದಿದ್ದೇವೆ, ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ, ಇನ್ನೊಂದು ಡಿಸೆಂಬರ್ ನಂತರ ಜಾರಿ ಮಾಡ್ತೀವಿ, ಇನ್ನು ಅನ್ನಭಾಗ್ಯದ ವಿಷಯದಲ್ಲಿ ಈ ತಿಂಗಳು ಹಣ ಕೊಡ್ತೀವಿ, ಮುಂದಿನ ತಿಂಗಳಿಂದ ಹತ್ತು ಕೆಜಿ ಅಕ್ಕಿಯನ್ನ ಕೊಡ್ತೀವಿ, ಒಂದು ಕೋಟಿ ಹತ್ತು ಲಕ್ಷ ಅಕೌಂಟಿಗೆ ಹಣ ಹಾಕ್ತೀವಿ ಎಂದು ತಿಳಿಸಿದರು.
ಮಂಗಳವಾರ ಬೆಂಗಳೂರು ಬಂದ್ ಹಿನ್ನಲೆ ಪ್ರತಿಕ್ರಿಯಿಸಿದ ಅವರು, ಸಂಘಟನೆಗಳು ಬಂದ್ ಮಾಡ್ತಿವೆ, ನಾವು ಕೂಡ ಆ ವಿಚಾರದಲ್ಲಿ ಹೋರಾಡಿದ್ದೇವೆ, ನೀರು ನಮಗೆ ಇಲ್ಲ ಕೊಡೋಕಾಗಲ್ಲ ಅಂತ ಹೇಳಿದ್ದೇವೆ, ಸುಪ್ರಿಂ ಕೋರ್ಟ್ ಏನು ತೀರ್ಪು ಕೊಟ್ಟಿದೆ ಅದಕ್ಕೆ ಬದ್ಧವಾಗಿರಬೇಕಾಗುತ್ತದೆ, ನೀರು ಇದ್ರೆ ಹಂಚಿಕೊಳ್ಳಬೇಕಾಗಿತ್ತು, ಆದ್ರೆ ನೀರಿಲ್ಲ ಅನ್ನೋ ವಿಚಾರವನ್ನು ಮನವಿ ಮಾಡಿದ್ದೇವೆ ಎಂದರು.
ಡಿಕೆ.ಶಿವಕುಮಾರ್ , ಮುಖ್ಯಮಂತ್ರಿ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗವಹಿಸಿದ ಫಲವಾಗಿ ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆಯನ್ನು ಮಾಡಲು ಸಾಧ್ಯವಾಗ್ತದೆ, ಇದರಿಂದ ತಮಿಳುನಾಡಿನವರಿಗೆ ಪ್ರಯೋಜನವಾಗುತ್ತೆ ಅವರು ಕೂಡ ಸಹಕರಿಸಬೇಕು, ನೀರಿಲ್ಲದಿದ್ರೂ ಸದ್ಯ 8-10 ಕ್ಯೂಸೆಕ್ ಒಳಹರಿವಿದೆ, ಸಂಘಸಂಸ್ಥೆಗಳು ಕ್ರಮಬದ್ಧವಾಗಿ ಹೋರಾಡ್ತಿದ್ದಾರೆ. ಶಾಂತಿಯಿಂದ ಮಾಡಲಿ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.