Sunday, March 26, 2023
spot_img
- Advertisement -spot_img

ನಾಯಿ ನಿಯತ್ತಿನ ಪ್ರಾಣಿ, ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್‌ನವರು : ಸಿ.ಟಿ ರವಿ ವಾಗ್ದಾಳಿ

ಚಿಕ್ಕಬಳ್ಳಾಪುರ: ನಾಯಿ ನಿಯತ್ತಿನ ಪ್ರಾಣಿ. ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ನಿಯತ್ತಾಗಿರುತ್ತೆ. ನಿಯತ್ತು ಇಲ್ಲದೇ ಇರೋರು ಕಾಂಗ್ರೆಸ್‌ನವರು. ಉಂಡ ಮನೆಗೆ ದ್ರೋಹ ಬಗೆಯುವವರು ಯಾರು ಅಂತಾ ಸಿದ್ದರಾಮಯ್ಯಗೆ ಗೊತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದವರೊಂದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಅವರನ್ನ ನಾಯಿಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೇಶ ಕಾಯುವಾಗ ನಾವು ನಿಯತ್ತಿನ ನಾಯಿಗಳು, ದೇಶ – ರಾಜ್ಯದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳು ಎಂದು ಗುಡುಗಿದ್ದಾರೆ.

ರೈಲ್ವೆ ಹಾಗೂ ಹೆದ್ದಾರಿಗಳಿಗೆ ಅತಿ ಹೆಚ್ಚು ಹಣ ಕೊಟ್ಟಿದ್ದು ಬಿಜೆಪಿ ಕೇಂದ್ರ ಸರ್ಕಾರ. ರೈತರಿಗೆ ರೈತ ಸಮ್ಮಾನ್ ಹಣ ನೀಡ್ತಿರೋದು ಮೋದಿ ಸರ್ಕಾರ. ರಾಜ್ಯ, ದೇಶದ ಹಿತಾಸಕ್ತಿ ಪ್ರಶ್ನೆ ಬಂದಾಗ ನಾವೆಲ್ಲರೂ ರಾಜಾಹುಲಿಗಳೇ, ನಾವ್ ದೇಶ ಕಾಯುವಾಗ ನಿಯತ್ತಿನ ನಾಯಿಗಳೂ ಹೌದು. ಆದ್ರೆ ನಿಯತ್ತು ಇಲ್ಲದ ನಿಮ್ಮನ್ನ ಯಾವುದಕ್ಕೆ ಹೋಲಿಕೆ ಮಾಡಲಿ ಅಂತಾ ಪ್ರಶ್ನಿಸಿದ್ದಾರೆ.

ಜೆಡಿಎಸ್‌ನಲ್ಲಿದ್ದು ಅವರಿಗೆ ದ್ರೋಹ ಬಗೆದವರು ಯಾರು? ಜಿ.ಪರಮೇಶ್ವರ್ ಸಿಎಂ ಆಗಿಬಿಡ್ತಾರೆ ಅಂತಾ ಸೋಲಿಸಿದವರು ಯಾರು? ಸಿದ್ದರಾಮಯ್ಯ ತಮ್ಮ ಆತ್ಮ ಸಾಕ್ಷಿ ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

Related Articles

- Advertisement -

Latest Articles