Sunday, October 1, 2023
spot_img
- Advertisement -spot_img

ಬಿಜೆಪಿ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ: ಸಚಿವ ಬೈರತಿ ಸುರೇಶ್

ಕಲಬುರಗಿ : ‘ಬಿಜೆಪಿ’ ಹಾಗೂ ‘ಜೆಡಿಎಸ್’ ಮೈತ್ರಿ ನಮ್ಮ ಮೇಲೆ ಪರಿಣಾಮ ಬೀರಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆಯನ್ನು ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಸುದ್ಧಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೊದಲಿನಿಂದಲೂ ಒಟ್ಟಿಗೆ ಇದ್ದಾರೆ. ಇವರ ಮೈತ್ರಿ ನಮ್ಮ ಮೇಲೆ ಪರಿಣಾಮ ಬೀರಲ್ಲ ಬದಲಾಗಿ ಒಳ್ಳೆಯದೇ ಆಗುತ್ತದೆ. ನಾವು ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದ್ದೇವೆ; ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಿ 20 ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ : ‘ಅಸ್ಪೃಶ್ಯತೆ ವಿರುದ್ಧ ಹೋರಾಡಿದವರೆಲ್ಲ ಸನಾತನ ಧರ್ಮದ ವಿರೋಧಿಗಳೆ’

ಉದಯನಿಧಿ ಸ್ಟಾಲಿನ್ ವಿಚಾರವಾಗಿ ಮಾತನಾಡಿದ ಅವರು, ‘ಸ್ಟಾಲಿನ್ ನಮ್ಮ ಪಕ್ಷದವರಲ್ಲ; ಕಾಂಗ್ರೆಸ್ ಒಕ್ಕೂಟದಲ್ಲಿ ಇದ್ದಾರೆ. ಸ್ಟಾಲಿನ್ ಮಾತನಾಡಿರುವುದು ಅದು ಅವರ ವೈಯಕ್ತಿಕ ವಿಚಾರ. ಕಾಂಗ್ರೆಸ್ ನಾಯಕರ ಮಾತಿಗಷ್ಟೇ ನಾವು ಬದ್ಧರು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : ‘ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮ ವಿರೋಧವಿಲ್ಲ; ಐ ವಿಶ್ ದೆಮ್ ಆಲ್ ದಿ ಬೆಸ್ಟ್’

ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ ಅಭಿಪ್ರಾಯ ನೀಡಿದ ಸಚಿವ ಬೈರತಿ ‘ಪ್ರಿಯಾಂಕ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ, ಅವರಿಗೆ ವಾಕ್ ಸ್ವಾತಂತ್ರ ಇದೆ. ಅವರ ಮೇಲೆ ಉತ್ತರ ಪ್ರದೇಶದಲ್ಲಿ ದೂರು ದಾಖಲಾಗಿದೆ; ಕರ್ನಾಟಕದಲ್ಲಿಯೇ FIR ಮಾಡ ಬೇಕಿತ್ತು, ಬಿಜೆಪಿ ಸರ್ಕಾರ ಇರೋ ರಾಜ್ಯದಲ್ಲಿ‌ ಮಾಡಲಾಗಿದೆ. ಇವರ ಈ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles