ರಾಯಚೂರು: ನಮ್ಮದು ಆಪರೇಶನ್ ಅಲ್ಲ, ಕೋ ಆಪರೇಶನ್ ಎಂದು ರಾಯಚೂರಿನಲ್ಲಿ ಸಚಿವ ಎನ್ ಎಸ್ ಬೋಸರಾಜ್ ಹೇಳಿದರು.
ರಾಜ್ಯದಲ್ಲಿ ಆಪರೇಷನ್ ಹಸ್ತ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಆಪರೇಶನ್ ಅನ್ನೋದು ಕೆಟ್ಟ ಶಬ್ದ , ದೇಶದಲ್ಲಿ ಆಪರೇಶನ್ ಮಾಡಿದ್ದು ಬಿಜೆಪಿ, ಆ ಕೆಟ್ಟ ಶಬ್ದ ಉಪಯೋಗ ಮಾಡಲು ನಮ್ಮ ಪಕ್ಷ ತಯಾರಿಲ್ಲ ಎಂದರು.
ಇದನ್ನೂ ಓದಿ : ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ದೂರವಾಣಿ ಕರೆ; ಮತ್ತೆ ಬಿಜೆಪಿ ಸೇರ್ತಾರಾ ಮಾಜಿ ಸಿಎಂ?
ಕ್ಷೇತ್ರದ ಬಗ್ಗೆ ಇರಬಹುದು, ಇಲ್ಲ ರಾಜಕೀಯವಾಗಿಯೇ ಭೇಟಿಯಾಗ್ತಿದ್ದಾರೆ, ಎರಡು ನಡೆಯುತ್ತಲೇ ಇರ್ತವೆ..
ನಾವು ಏನು ಹೇಳುವಂಥದ್ದಿಲ್ಲ, ಅದಕ್ಕೆ ಸಿಎಂ,ಕೆಪಿಸಿಸಿ ಅಧ್ಯಕ್ಷರ ಹಂತದಲ್ಲಿ ಎಲ್ಲವೂ ನಡೀತಿದೆ..ರಾಜಕೀಯ ನಿಂತ ನೀರಲ್ಲ, ಪಕ್ಷದ ತತ್ತ್ವ ಸಿದ್ದಾಂತಕ್ಕೆ ಬದ್ಧರಾಗಿದ್ರೆ ಪಕ್ಷದ ಒಳಗೆ ಬರ್ತಾರೆ ಎಂದು ಪಕ್ಷಕ್ಕೆ ಸೇರ್ಪಡೆಯಾಗುವವರ ಬಗ್ಗೆ ತಿಳಿಸಿದರು.
ಬಿಜೆಪಿ ಮಧ್ಯ ಪ್ರದೇಶ,ಗೋವಾ,ರಾಜ್ಯದಲ್ಲಿ ಸೇರಿ ಅನೇಕ ಕಡೆ ಆಪರೇಶನ್ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಇಲ್ಲದಿರೊ ಹಾಗೇ ಮಾಡಿದೆ, ಸಂವಿಧಾನಕ್ಕೆ ಕೆಟ್ಟ ಹೆಸರು ತಂದಿದ್ದಾರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರೋ ಪಕ್ಷ ನಮ್ಮದು ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.