ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ‘ಮೈತ್ರಿಯಾದರೆ ಬಹಳ ಸಂತೋಷ; ಈ ಹಿಂದೆ ಕುಮಾರಣ್ಣ, ಅಶೋಕಣ್ಣ ಮೈತ್ರಿ ಮಾಡಿಕೊಂಡಿದ್ದರು. ಈಗ ಮೈತ್ರಿಯಾದರೆ ಸಿದ್ಧಾಂತ ಹೇಗೆ ಉಳಿಸಿಕೊಳ್ತಾರೋ ಗೊತ್ತಿಲ್ಲ. ಪಕ್ಷ (ಜೆಡಿಎಸ್) ಉಳಿದುಕೊಳ್ಳುತ್ತೋ ಇಲ್ವೋ ಗೊತ್ತಿಲ್ಲ. ಮೈತ್ರಿ ಮಾತುಕತೆಗೆ ನಮ್ಮ ವಿರೋಧವಿಲ್ಲ, ಐ ವಿಶ್ ದೆಮ್ ಆಲ್ ದಿ ಬೆಸ್ಟ್’ ಎಂದು ಹೇಳಿದರು.
ಈ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ರಾಮನಗರ ಬಂದ್ ವಿಚಾರವಾಗಿ ಮಾತನಾಡಿದರು. ‘ಇದು ರಾಜಕೀಯ ಪ್ರೇರಿತ ಬಂದ್, ಕುಮಾರಸ್ವಾಮಿ (HD Kumaraswamy) ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜಿನ ಟೆಂಡರ್ ನಡೆದಿತ್ತು. ಭೂಮಿ ಪೂಜೆ ಆಗುವ ಹೊತ್ತಿಗೆ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ರು. ಯೂನಿವರ್ಸಿಟಿ ಒಂದು ಕಡೆ ಮೆಡಿಕಲ್ ಕಾಲೇಜು ಇನ್ನೊಂದು ಕಡೆ ಆಗುತ್ತೆ. ಮೆಡಿಕಲ್ ಕಾಲೇಜು ಕನಕಪುರಕ್ಕೆ ಕೊಡುವುದಕ್ಕೆ ಕುಮಾರಸ್ವಾಮಿ ದಡ್ಡರಲ್ಲ. ಪ್ರತಿಭಟನೆ ಮಾಡುವವರು ಹಾಗೂ ಜನರ ಮಧ್ಯೆ ಜಗಳ ಮಾಡುವವರು ಮಾಡಿಕೊಳ್ಳಲಿ’ ಎಂದು ಬಿಜೆಪಿ (BJP) ನಾಯಕರಿಗೆ ಪರೋಕ್ಷ ತಿರುಗೇಟು ಕೊಟ್ಟರು.
ಇದನ್ನೂ ಓದಿ; ಡಿ.ಕೆ. ಶಿವಕುಮಾರ್ ಭೇಟಿಯಾದ ವಿಪ್ರೊ ಅಧ್ಯಕ್ಷ ಅಜೀಮ್ ಪ್ರೇಮ್‌ಜಿ
ನಗರದ ಫ್ರೀಡಂಪಾರ್ಕಿನಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಕೇಂದ್ರ ಸರ್ಕಾರದಿಂದ ಮೊದಲು ಮೇಕೆದಾಟು, ಮಹಾದಾಯಿಗೆ ಅನುಮತಿ ಕೊಡಿಸಲಿ. ಜನ ಅವರನ್ನು ವೀರೋಧಿಸಿದ್ದಕ್ಕೆ ಪ್ರತಿಪಕ್ಷ ನಾಯಕನ್ನು ಆಯ್ಕೆ ಮಾಡಲಿಕ್ಕೆ ಆಗಲಿಲ್ಲ. ಗ್ಯಾರಂಟಿ ಯೋಜನೆಗಳು ಜಾರಿ ಆಗಿದೆ; ಅದಕ್ಕೆ ಅವರಿಗೆ ಸಹಿಸಲಿಕ್ಕೆ ಆಗಲಿಲ್ಲ. ನೂರು ದಿನಗಳಲ್ಲಿ ಅಭಿವೃದ್ಧಿ ಮಾಡಿದ್ವಿ, ದೇಶದಲ್ಲಿ ಇಂತಹ ಪಕ್ಷ ಇದೆಯಾ? ಪ್ರತಿಭಟನೆ ಮಾಡುವುದಾದ್ರೆ ಮಾಡಲಿ ಬಿಡಿ’ ಎಂದರು.
ಆಪರೇಷನ್ ಹಸ್ತದ ಬಗ್ಗೆ ಮಾತನಾಡಿ, ‘ನಾನು ಆಪರೇಷನ್ ಹಸ್ತಕ್ಕೆ ವಿರೋಧ; ನಮ್ಮದು ಸ್ನೇಹದ ಹಸ್ತ. ನಮ್ಮ ಸಿದ್ಧಾಂತ, ಭಾರತ್ ಜೋಡೋ ಯಾತ್ರೆಗೆ ಯಾರು ಮೆಚ್ಚುಗೆ ಕೊಡುತ್ತಾರೋ ಅವರನ್ನು ಅಪ್ಪಿಕೊಂಡು ಬರಮಾಡಿಕೊಳ್ತೀವಿ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.