Sunday, October 1, 2023
spot_img
- Advertisement -spot_img

‘ಸುಪ್ರೀಂನಿಂದ ಬೈಸ್ಕೊಳ್ಳೋಕೆ ನಾವು ಸಿದ್ದರಿಲ್ಲ, ನೀರು ಬಿಡಲು ನಾನು ಸೂಚಿಸಿಲ್ಲ’

ಮೈಸೂರು : ಸುಪ್ರೀಂಕೋರ್ಟ್‌ನಿಂದ ಬೈಸಿಕೊಳ್ಳಲು ನಾವು ತಯಾರಿಲ್ಲ. ಕಾವೇರಿ ನದಿ ನೀರಿನ ವಿಚಾರದಲ್ಲಿ ಶುಕ್ರವಾರ ಕಲಾಪವಿದೆ. ಕಾನೂನು ತಜ್ಞರ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ, ನಮ್ಮ ವಕೀಲರು ಸಮರ್ಥವಾದ ಮಂಡಿಸಿದ್ದಾರೆ. ಆದರೆ ಇದುವೆರೆಗೂ ನಾನು ತಮಿಳುನಾಡಿಗೆ ನೀರು ಬಿಡಲು ಯಾವುದೇ ಸೂಚನೆ ನೀಡಿಲ್ಲ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟಿನ ಆದೇಶದಂತೆ ಈ ಕೂಡಲೇ ಐದು ಸಾವಿರ ಕ್ಯುಸೆಕ್ ನೀರು ಬಿಡಬೇಕಾಗಿದೆ. ತಮಿಳುನಾಡಿನವರು 24 ಸಾವಿರ ಕ್ಯುಸೆಕ್ ನೀರು ಬಿಡಲು ಬೇಡಿಕೆ ಇಟ್ಟಿದ್ದರು. ಅದರ ವಿರುದ್ಧ ನಮ್ಮ ವಕೀಲರು ಪ್ರಬಲ ವಿಷಯ ಮಂಡಿಸಿ 5 ಸಾವಿರ ಕ್ಯುಸೆಕ್‌ಗೆ ಇಳಿಸಿದ್ದಾರೆ. ಆದರೂ ಕಾವೇರಿಯಿಂದ ನೀರು ಬಿಡಲು ನಾವು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : ‘ಗೃಹಲಕ್ಷ್ಮಿ’ಗೆ ಚಾಲನೆ ನೀಡಲು ರಾಜ್ಯಕ್ಕೆ ಇಂದು ರಾಹುಲ್ ಆಗಮನ

ನಾವು ರೈತರ ಹಿತ ಕಾಪಾಡುವುದರ ಜೊತೆಗೆ ಕಾನೂನನ್ನು ಕೂಡ ಗೌರವಿಸಬೇಕಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದರ ಬಗ್ಗೆ ತಿಳಿಸುತ್ತೇನೆ. ಯಾರ್‍ಯಾರ ಅವಧಿಯಲ್ಲಿ ಎಷ್ಟು ನೀರು ಬಿಟ್ಟಿದ್ದಾರೆ ಎನ್ನುವುದು ನಮಗೂ ಗೊತ್ತಿದೆ. ಇದರಲ್ಲಿ ರಾಜಕೀಯ ಮಾಡಬಾರದೆಂದು ನಾನು ಸುಮ್ಮನಿದ್ದೇನೆ. ಈ ವಿಚಾರಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ಆದರೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಕೀಲಿ ಕೇಂದ್ರ ಸರ್ಕಾರದ ಕೈಯಲ್ಲೂ ಇದೆ. ಇದರಲ್ಲಿ ನಮ್ಮನ್ನು ಕಟ್ಟಿ ಹಾಕಲು ರಾಜ್ಯ ಬಿಜೆಪಿ ಪ್ರಯತ್ನಿಸುತ್ತಿದೆ. ಎಲ್ಲರಿಗೂ ಎಲ್ಲ ರೀತಿಯ ವಾಸ್ತವ ಗೊತ್ತಿದೆ. ರಾಜಕಾರಣ ಮಾಡಲು ಹೊರಟಿದ್ದಾರೆ, ಮಾಡಲಿ ಬಿಡಿ. ನಮ್ಮ ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles