Friday, September 29, 2023
spot_img
- Advertisement -spot_img

ನಾವು ಯಾರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿಲ್ಲ : ಡಿಸಿಎಂ ಡಿಕೆಶಿವಕುಮಾರ್

ಮೈಸೂರು : ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಗೃಹಲಕ್ಷ್ಮೀ ಯೋಜನೆ ಚಾಲನೆ ಸಂಬಂಧ ಅಧಿಕಾರಿಗಳ ಜೊತೆ ಡಿಸಿಎಂ ಸಭೆ ನಡೆಸಿ ಮಾತನಾಡಿದರು.

ಅವರಾಗಿಯೇ ಅವರು ಪಕ್ಷಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದಾರೆ, ಬರುವವರಿಗೆ ಸ್ವಾಗತ ಕೋರುತ್ತಿದ್ದೇವೆ, ನಾವಾಗಿಯೇ ನಾವು ಯಾರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತಿಲ್ಲ, ಅವರ ಭವಿಷ್ಯ, ನಮ್ಮ ಪಕ್ಷದ ವರ್ಚಸ್ಸು ಎಲ್ಲದನ್ನೂ ಗಮನಿಸಿಕೊಂಡು ಅವರೇ ನಿರ್ಧಾರ ಮಾಡುತ್ತಿದ್ದಾರೆ, ಎಷ್ಟು ಜನ ಬರುತ್ತಾರೆ ಎಂಬುದನ್ನು ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಎಲ್ಲದ್ದಕ್ಕೂ ಕಾಲ, ಸಮಯ ಘಳಿಗೆ ಎಂಬುದು ಇರುತ್ತದೆ, ಆ ಘಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ ಎಂದರು.

ಇದನ್ನೂ ಓದಿ; ಕೆಆರ್‌ಎಸ್‌ ಡ್ಯಾಂ: ವಾರದಲ್ಲಿ 7 ಟಿಎಂಸಿ ನೀರು ಖಾಲಿ; ಮಂಡ್ಯ ರೈತರಲ್ಲಿ ಆತಂಕ!

ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಸೆಳೆಯುವ ಪ್ರಯತ್ನ ಆಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ,
ಇಂತಹ ಮಾತುಗಳನ್ನ ನಾನು ಹೇಳುತ್ತ ಹೋದರೆ ಅದು ದೊಡ್ಡ ಪಟ್ಟಿ ಆಗತ್ತೆ, ಈಗ ಅದರ ಬಗ್ಗೆ ಚರ್ಚೆ ಬೇಡ ಎಂದು ತಿಳಿಸಿದರು. ಇನ್ನೂ ಗೃಹಲಕ್ಷ್ಮಿ ಸಭೆಯಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲದ ಮೊಹಮದ್ ನಲ್ಪಾಡ್ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದ್ರೆ ಈ ಸಭೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles