ಬೆಂಗಳೂರು: ಕಾಂಗ್ರೆಸ್ ರೀತಿ ಸೋನಿಯಾ ಮೊದಲು ಅಂತ ಹೇಳ್ತಿಲ್ಲ ನಮಗೆ ದೇಶ ಮೊದಲು ಎಂದು ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ಆರ್.ಅಶೋಕ್ ಹೇಳಿದ್ದಾರೆ. ವಿದೇಶದಿಂದ ಆಗಮಿಸಿದ ಪ್ರಧಾನಿ ಮೋದಿ ಸ್ವಾಗತಕ್ಕೆ ಆಗಮಿಸಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಮೋದಿ ಕಂಡರೆ ಆಗಲ್ಲ, ವಿಜ್ಞಾನಿಗಳ ಕಂಡರೆ ಆಗಲ್ಲ. ದೇಶ, ರಾಜ್ಯ ಮುಂದುವರೆಯಬೇಕು ಅನ್ನೋದು ಅವರಿಗೆ ಇಷ್ಟವಿಲ್ಲ ಎಂದಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ, ಇದು ದೇಶದ ಕಾರ್ಯಕ್ರಮ ಇದನ್ನೂ ರೋಡ್ ಶೋ ಅಂತಾದ್ರೂ ಕರೆಯಲಿ, ಏನಾದ್ರೂ ಕರೆಯಲಿ ಅಡ್ಡಿಯಿಲ್ಲ, ನಮಗೆ ದೇಶ ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ: ʼಇಸ್ರೋʼ ಅಭಿನಂದಿನಲು ಬೆಂಗಳೂರಿಗೆ ಬಂದ ಮೋದಿ
ಚಂದ್ರಯಾನ-3 ಯೋಜನೆ ಯಶಸ್ವಿಯಾಗಿರುವ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳನ್ನು ಖುದ್ದು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹಾಗೂ ಇಡೀ ಚಂದ್ರಯಾನದ ತಂಡವನ್ನು ಭೇಟಿಯಾಗಿ ಅಭಿನಂದಿಸಲಿದ್ದು, ಬಳಿಕ ಮತ್ತೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.