ಬೆಂಗಳೂರು: ಕಾಂಗ್ರೆಸ್ನವರೇ ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. ಕಮಿಷನ್ ವಿಚಾರ ಸದನದ ಆರಂಭದ ದಿನವೇ ತೆಗೆದುಕೊಳ್ಳಬಹುದಿತ್ತು. ಆದ್ರೆ ಕೊನೆಯ ದಿನ ಯಾಕೆ ಆ ಸಿದ್ದಿಯನ್ನ ಯಾಕೆ ಎತ್ತಿದ್ರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ವಿಚಾರ ಸದನದ ಕೊನೇ ದಿನ ಏಕೆ ಕೈಗೆತ್ತಿಕೊಂಡ್ರು. 40% ಕಮಿಷನ್ ಆರೋಪ ವಿಚಾರದಲ್ಲಿ ನಾವು ಮುಕ್ತರಿದ್ದೇವೆ. ಈಗಲೂ ದಾಖಲೆ, ದೂರು ನೀಡಿದ್ರೆ ನಾವು ತನಿಖೆ ಮಾಡಿಸುತ್ತೇವೆ ಎಂದರು. ಇನ್ನು ಪೇಸಿಎಂ ಅಭಿಯಾನಕ್ಕೆ ಬಿಜೆಪಿ ಕೌಂಟರ್ ಏನು ಎಂಬ ಪ್ರಶ್ನೆಗೆ ಉತ್ತರಿಸಿ, ಏನೇಲ್ಲ ಮಾಡಬೇಕೊ ಎಲ್ಲವನ್ನೂ ಮಾಡ್ತೀವಿ. ಕಾಂಗ್ರೆಸ್ನವರು ಯಾವ ಕ್ಯಾಂಪೇನ್ ಬೇಕಾದ್ರೂ ಮಾಡಲಿ. ಕೊನೆಗೆ ಸತ್ಯಕ್ಕೆ ಜಯ ಸಿಗುತ್ತೆ ಎಂದು ‘ಪೇ ಸಿಎಂ’ ಪೋಸ್ಟರ್ ಅಭಿಯಾನ ವಿಚಾರವಾಗಿ ಹೇಳಿಕೆ ನೀಡಿದರು. ಮುಂದುವರೆದು ಮಾತನಾಡಿದ ಅವರು, ಎರಡು ವಾರ ಅಧಿವೇಶನ ನಡೆದಿದೆ. ಸದನದಲ್ಲಿ ಅತಿವೃಷ್ಟಿ ಬಗ್ಗೆ ಚರ್ಚೆ ನಡೆಸಲಾಯಿತು. ವಿಪಕ್ಷದವರು ಎತ್ತಿರುವ ವಿಚಾರಗಳು ಅವರಿಗೇ ತಿರುಗೇಟು ನೀಡಲಾಗಿದೆ. ಗುತ್ತಿಗೆದಾರರ ಸಂಘದ ಪತ್ರದ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಇವತ್ತು ನಾನು ಗುತ್ತಿಗೆದಾರರ ಸಂಘಕ್ಕೆ ಕೇಳುತ್ತೇನೆ ದಾಖಲೆ ಕೊಡಿ , ದಾಖಲೆ ಕೊಟ್ರೆ ನೇರವಾಗಿ ಲೋಕಾಯುಕ್ತ ತನಿಖೆಗೆ ನೀಡ್ತೇನೆ. ಪುರಾವೆ ಇಲ್ಲದೇ ಮಾತಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ. ಆಧಾರ ನೀಡದೇ ಒಂದು ವರ್ಷದಿಂದ ಆರೋಪ ಮಾಡುತ್ತಿದ್ದಾರೆ. 40% ಕಮಿಷನ್ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ವಿ, ದಾಖಲೆ ನೀಡಿಲ್ಲ. ಆದರೆ ಯಾರೂ ಕೂಡ ದಾಖಲೆ ನೀಡಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪುಸ್ತಕವನ್ನೇ ಮಾಡಿದ್ದೇವೆ. ಯಾವ ಕ್ಯಾಂಪೇನ್ ಆದ್ರೂ ಮಾಡಲಿ ಸತ್ಯಕ್ಕೆ ಜಯ ಸಿಗುತ್ತದೆ. ಪುರಾವೆ ಇಲ್ಲದೇ ಮಾತನಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ ಎಂದರು.