ಚಿಕ್ಕೋಡಿ: ಮೋದಿ ಗೆಲ್ಲಿಸಿ ಭಾರತ ಉಳಿಸಿ’ ಎಂಬ ಅಭಿಯಾನ ಪ್ರಾರಂಭ ಮಾಡಲಿದ್ದೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಅಭಿಯಾನ ರಾಜ್ಯದ 224 ಕ್ಷೇತ್ರಗಳಲ್ಲಿ ನಡೆಯಲಿದ್ದು, ಮೋದಿಯವರ ಸಾಧನೆಗಳು ಮತ್ತು ಭವಿಷ್ಯದಲ್ಲಿ ಆಗಬೇಕಾದ ಯೋಜನೆಗಳ ಬಗ್ಗೆ ಜನರಿಗೆ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ಆರಂಭಿಸುತ್ತಿದ್ದೇವೆ. ಡಿಸೆಂಬರ್ 31 ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದೇವೆ, ಅಭಿಯಾನದ ಉದ್ಘಾಟನೆ ಚಿಕ್ಕೋಡಿಯಿಂದಲೇ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ವಕ್ಫ್ ಬೋರ್ಡ್ ರದ್ದಾಗಬೇಕು ಇದೊಂದು ದೊಡ್ಡ ಮಾಫಿಯಾ. ಮುಸ್ಲಿಂ ಸಮುದಾಯದಿಂದ ವಕ್ಫ್ ಬೋರ್ಡ್ ಹೆಸರಿನಲ್ಲಿ ಭೂಕಬಳಿಕೆ ನಡೀತಿದೆ. ಲೋಕಸಭೆ ಚುನಾವಣೆ ಗೆದ್ದ ಮೇಲೆ ವಕ್ಫ್ ಬೋರ್ಡ್ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆದಿತ್ಯ ಠಾಕ್ರೆ ಸೇರಿ ಇಬ್ಬರ ವಿರುದ್ಧ ದಾಖಲಾಯ್ತು ಎಫ್ಐಆರ್!
ಭಾರತದಲ್ಲಿ ಸಮಾನ ಕಾನೂನು ರಚನೆಯಾಗಬೇಕು. ಬಹುತೇಕ ಎಲ್ಲ ದೇಶಗಳಲ್ಲೂ ಸಮಾನ ಕಾನೂನು ಇದೆ. ಭಾರತದಲ್ಲಿ ಎಲ್ಲ ರೀತಿ ಜಾತಿಯ ಜನರಿದ್ದಾರೆ. ಆದ್ರೆ ಮುಸ್ಲಿಂ ಸಮುದಾಯಕ್ಕೆ ಭಾರತದ ಕಾನೂನು ಅನ್ವಯವಾಗುವಂತಿಲ್ಲ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಹದಿನಾರು ವಯಸ್ಸಿಗೆ ಮದುವೆ ಮಾಡ್ತಾರೆ. ಮುಂದಿನ ಐದಾರು ವರ್ಷಗಳಲ್ಲಿ ಐದಾರು ಮಕ್ಕಳಿಗೆ ಜನ್ಮ ಕೊಡ್ತಾರೆ. ಇದರಿಂದಾಗಿ ಜನಸಂಖ್ಯೆಯಲ್ಲಿಯೂ ಹೆಚ್ಚಳವಾಗ್ತಿದೆ. ಹೀಗಾಗಿ ಭಾರತದಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೆಇಎ ಪರೀಕ್ಷೆಗೆ ಹಿಜಾಬ್ ಮುಕ್ತ ಮಾಡಿದ್ದಾರೆ. ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಇದು ಬಿಜೆಪಿ ಆರ್ಡರ್ ಅಲ್ಲ, ಆರ್ ಎಸ್ ಎಸ್ ಮಾಡಿರೋ ನಿಯಮ ಅಲ್ಲ.
ಪರೀಕ್ಷೆಯಲ್ಲಿ ಹಿಂದೂ ಹೆಣ್ಣುಮಕ್ಕಳ ತಾಳಿ ಬಿಚ್ಚುತ್ತಿದ್ದಾರೆ. ಮುಸ್ಲಿಂರಿಗಿಲ್ಲದ ಕಾನೂನು, ಹಿಂದೂ ಹೆಣ್ಮಕ್ಕಳಿಗೆ ಯಾಕೆ..? ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಏನು ಬೇಕಾದ್ರೂ ಮಾಡಬಹುದೇ..?
ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದ ತುಷ್ಟೀಕರಣ ಮಾಡ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡ್ತಿದೆ ಎಂದರು.
ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದ ಮಾಜಿ ಸಂಸದ ಮುದ್ದಹನುಮೇಗೌಡ: ಮತ್ತೆ ‘ಕೈ’ ಹಿಡಿಯುವ ಸಾಧ್ಯತೆ
ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿ ನಾಯಕರು ಸಲಾಂ ಹೊಡಿತಿದ್ದಾರೆ ಎಂಬ ಜಮೀರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ಒಬ್ಬ ಮತಾಂಧ. ಜಮೀರ್ ಒಳಗಡೆ ಮುಸ್ಲಿಂ ಭೂತ ಒಳಗಡೆ ಸೇರಿದೆ. ಬಿಜೆಪಿಯವರು ಜಮೀರ್ ವಿರುದ್ಧ ಕೇಸ್ ದಾಖಲಿಸಬೇಕು. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಅವರ ಮನಸ್ಥಿತಿ ತೋರಿಸುತ್ತದೆ.
ಕೇಸ್ ಹಾಕಿ, ಜೈಲಿಗೆ ಹಾಕೋ ಕೆಲಸ ಬಿಜೆಪಿ ಮಾಡಬೇಕು. ಗೋವು ರಕ್ಷಣೆ ಮಾಡುತ್ತಿದ್ದವರ ಮೇಲೆ ಕಾಂಗ್ರೆಸ್ ಸರ್ಕಾರ ಕೇಸ್ ದಾಖಲಿಸುತ್ತಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸ್ ಹಾಕ್ತಿದ್ದಾರೆ. ಗೋ ರಕ್ಷಣೆ ಮಾಡಿದ್ರೆ ಕಾಂಗ್ರೆಸ್ ನೀಚ ಸರ್ಕಾರ ಅಂತಹವರ ವಿರುದ್ಧ ಕೇಸ್ ಹಾಕ್ತಿದ್ದಾರೆ ಎಂದು ಆಕ್ರೋಶಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.