ರಾಮನಗರ: ನಾವು ಭಾರತೀಯರು, ನಮ್ಮದೇ ಆದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದೇವೆ, ಆದರೆ ನಮ್ಮ ಒಕ್ಕೂಟ ವ್ಯವಸ್ಥೆ ಬುಡಮೇಲು ಮಾಡಲು ಬಿಜೆಪಿ ಹೊರಟಿದೆ ಎಂದು ಇಂಡಿಯಾ ಬದಲು ಭಾರತ್ ಎಂದು ನಾಮಕರಣ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.
ಈ ಬಗ್ಗೆ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಇದು ಒಂದು ಪಕ್ಷದ ಮೇಲೆ ಮಾಡ್ತಿರೋ ದಬ್ಬಾಳಿಕೆ, ಇಂಡಿಯಾ ಅನ್ನೋದು ನಮ್ಮ ಹಕ್ಕು, ಆ ಹೆಸರನ್ನ ನಾವು ಇಟ್ಟುಕೊಂಡಿದ್ದೇವೆ ದೇಶದಲ್ಲಿ ಸಂವಿಧಾನ ಉಳಿಸಲು ಒಟ್ಟಾಗಿದ್ದೇವೆ. ನರೇಂದ್ರ ಮೋದಿ ಚಕ್ರವ್ಯೂಹ ಬೇಧಿಸುತ್ತೇವೆ ಎಂದರು.
ತರಾತುರಿಯಲ್ಲಿ ಅಧಿವೇಶನ ಕರೆದಿದ್ದಾರೆ, ಯಾಕೆ ಕರೆದಿದ್ದಾರೆ ಅನ್ನೋದರ ಅಜೆಂಡಾ ಇಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಇದನ್ನ ಎದುರಿಸುತ್ತೇವೆ, ಅವರು ಏನೇ ಕುತಂತ್ರ ಮಾಡಿದ್ರೂ ಒಗ್ಗಟ್ಟಾಗಿ ಇರ್ತೇವೆ , ಸೆ.7ಕ್ಕೆ ಭಾರತ್ ಜೋಡೋ ಯಾತ್ರೆ ನಡೆದು ಒಂದು ವರ್ಷ, ಇದನ್ನ ಐಕ್ಯತಾ ದಿನ ಅಂತ ಆಚರಣೆ ಮಾಡ್ತಿದ್ದೇವೆ ಎಂದು ತಿಳಿಸಿದರು.
ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪಾದಯಾತ್ರೆ ಮಾಡ್ತೇವೆ, ಸಿಎಂ, ಡಿಸಿಎಂ ಈ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು. ರಾಮನಗರ ಮುಖ್ಯದ್ವಾರದಿಂದ 1 ಗಂಟೆಗಳ ಕಾಲ ನಡೆಯಲಿರುವ ಕಾಲ್ನಡಿಗೆಯಲ್ಲಿ ಕಾಂಗ್ರೆಸ್ ಎಲ್ಲ ನಾಯಕರು ರಾಮನಗರದಲ್ಲಿ ಪಾದಯಾತ್ರೆ ಮಾಡ್ತಾರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.