ಬೆಂಗಳೂರು: ನೀರು ಬಿಡೋಕೆ ಸದ್ಯಕ್ಕೆ ನಮ್ಮತ್ರ ಇಲ್ಲ, ನಾಳೆ ಮತ್ತೊಂದು ಮೇಲ್ಮಟ್ಟದ ಸಭೆ ಇದೆ, ಅಲ್ಲಿ ನಿರ್ಧಾರ ಮಾಡ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಲಿ ನಮ್ಮ ಅಧಿಕಾರಿಗಳು ಸದಸ್ಯರಿದ್ದಾರೆ, ನಾನು, ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ನೀರು ಬಿಡಲು ಆಗಲ್ಲ ಅಂತ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಆದರೆ ಅವರು 12.500 ಕ್ಯೂಸೆಕ್ ಕೇಳಿದ್ದಾರೆ, 5000 ಬಿಡಬೇಕು ಅಂತ ಪ್ರಾಧಿಕಾರ ಹೇಳಿದೆ ಎಂದು ತಿಳಿಸಿದರು.
ಇದನ್ನೂ ಓದಿ : ದೇಶದ 306 ಸಂಸದರ ವಿರುದ್ಧ ಇವೆ ಕ್ರಿಮಿನಲ್ ಕೇಸ್ : ಎಡಿಆರ್ ವರದಿ
ನೀರು ಬಿಡೋಕೆ ಸದ್ಯಕ್ಕೆ ನಮ್ಮಲ್ಲಿ ನೀರಿಲ್ಲ, ಈ ಸಂಬಂಧ ದೆಹಲಿ ಕಾನೂನು ತಜ್ಞರ ಜೊತೆ ಮಾತನಾಡುತ್ತಿದ್ದೇವೆ, ರೈತರ ಬೆಳೆಗಿಂತ ನಾವು ಕುಡಿಯುವ ನೀರು ಸೇವ್ ಮಾಡಬೇಕಿದೆ, ಸುಪ್ರೀಂ ಕೋರ್ಟ್ ನಾವು ನಿರ್ಧಾರ ಮಾಡಕ್ಕಾಗಲ್ಲ ಅಂತ ಕೈ ಚೆಲ್ಲಿದೆ, ಆದರೆ ನಾವು ನೀರು ಬಿಡುವುದು ಬಹಳ ಕಷ್ಟ, ಈ ಬಗ್ಗೆ ಜನ ನಮಗೆ ಸಹಕಾರ ಕೊಡಬೇಕು, ವಿಪಕ್ಷಗಳು ರಾಜ್ಯದ ಹಿತಕ್ಕೆ ಸಹಕಾರ ನೀಡಬೇಕು, ನಾನು ವಿಪಕ್ಷಗಳಂತೆ ಕಮಿಟಿ ರಾಜಕೀಯ ಮಾಡ್ತಿದೆ ಅಂತ ಹೇಳಲ್ಲ ಎಂದು ಕಿಡಿಕಾರಿದರು.
ತಮಿಳುನಾಡಿಗೆ ನೀರು ಬಿಡೋಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದ್ದು, ಸಮಿತಿ ಶಿಫಾರಸ್ಸಿಗೆ ಮಂಡ್ಯ ರೈತರು ಆಕ್ರೋಶಿಸಿದ್ದರು. ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಮಂಡ್ಯ ರೈತರನ್ನ ಕಾವೇರಿ ವಿಚಾರದಲ್ಲಿ ಮುಳುಗಿಸಿದ್ರಲ್ಲ ಎಂದು ಬಾಯಿ ಬಡಿದುಕೊಂಡು ನದಿಯಲ್ಲಿ ಮುಳುಗಿ ಮೇಲೆದ್ದು ಘೋಷಣೆ ಕೂಗಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.