ಕೊಪ್ಪಳ : ನಾನು ನಮ್ಮ ಸಿದ್ದರಾಮಯ್ಯನವರ ಹತ್ತಿರ ನಮ್ಮ ಕ್ಷೇತ್ರಕ್ಕೆ ಹಣ ಕೇಳೋಲ್ಲ, ಬದಲಾಗಿ ಕ್ಷೇತ್ರದ ಕೆಲಸಗಳಿವೆ ಅದನ್ನ ಮಾಡಿಸಿಕೊಳ್ತೇನೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ತಳಕಲ್ ಬಳಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಟಾಪ್ ಹತ್ತರಲ್ಲಿರಬೇಕು, ಅದು ನನ್ನ ಆಸೆಯಾಗಿತ್ತು, ಆದ್ರೆ ಕಳೆದ ಸರ್ಕಾರ ಏನು ಮಾಡಿಲ್ಲ, ಹೀಗಾಗಿ ನಮ್ಮ ಇಬ್ಬರು ಸಚಿವರನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ, ಇಬ್ಬರು ನನ್ನ ಒಳ್ಳೆಯ ಸ್ನೇಹಿತರು ಹಾಗೂ ಸಹೋದರರಿದ್ದಂತೆ, ನಮಗೆ ಯಾವುದೇ ಅನುದಾನ ಬೇಕಾಗಿಲ್ಲ ಎಂದರು .
ಇಬ್ಬರು ಸಚಿವರು ನಮ್ಮ ಎಂಜಿನಿಯರಿಂಗ್ ಕಾಲೇಜು, ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಅನುಕೂಲ ಮಾಡಿಕೊಡ್ತಾರೆ, ಇಲ್ಲಿಗೆ ಸಿಬ್ಬಂದಿ ಕೊರತೆಯಿದೆ ಅದನ್ನ ನೀವು ಮಾಡಿಕೊಡಬೇಕು, ಎಂಜಿನಿಯರಿಂಗ್ ಕಾಲೇಜು ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ನೀರಿನ ಕೊರತೆ ಇದ್ದು, ಅದನ್ನ ನೀಗಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಪಕ್ಷದವ್ರು ಸಿಎಂ, ಡಿಸಿಎಂ ಭೇಟಿಯಾಗೋದು ಸಹಜ: ಅಶ್ವತ್ಥ್ ನಾರಾಯಣ
ಇನ್ನೂ ಇದೇ ವೇಳೆ ರಾಯರೆಡ್ಡಿಯವರು ಏನೇ ಮಾಡಿದ್ರು ರಾಯಲ್ ಆಗಿ ಮಾಡ್ತಾರೆ, ಅದಕ್ಕೆ ನಾವು ರಾಯಲ್ ರೆಡ್ಡಿ ಕರಿಯುತ್ತೇವೆ ಎಂದು ಶರಣ ಪ್ರಕಾಶ ಪಾಟೀಲ ಹೇಳಿದರು. ಅವರು ಈಗಾಗಲೇ ಹಣ ಬೇಡ ಅಂದಿದ್ದಾರೆ. ಕೇವಲ ಸಿಬ್ಬಂದಿ ಕೇಳ್ತಿದ್ದಾರೆ, ಅದನ್ನ ನಾವು ನಮ್ಮ ಉನ್ನತ ಶಿಕ್ಷಣ ಸಚಿವರು ಮಾಡಿಕೊಡ್ತೇವೆ ಎಂದು ಭರವಸೆ ನೀಡಿದರು.
ನಮ್ಮ ಭಾಗಕ್ಕೆ ಕಾಮಧೇನು ಆಗಿ ಕೆಕೆಆರ್ ಡಿಬಿ ನಿಗಮವಿದೆ, ಅದರಲ್ಲಿ ಸಾಕಷ್ಟು ಅನುದಾನವಿದ್ದು, ಕೆಲಸ ಮಾಡಿಕೊಳ್ಳಬಹುದು, ನಮ್ಮ ನಾಯಕರು ಮಲ್ಲಿಕಾರ್ಜುನ ಖರ್ಗೆಯರ ಪರಿಶ್ರಮದಿಂದ ಆರ್ಟಿಕಲ್ 371 ಜೆ ಅನುಷ್ಠಾನ ಆಗಿದೆ, ಇದು ನಮ್ಮ ಭಾಗದಲ್ಲೇ ಇರೋದ್ರಿಂದ ಅಭಿವೃದ್ಧಿ ಮಾಡ್ತೇವೆ, ರಾಯರೆಡ್ಡಿ ಸಾಹೇಬ್ರ ಜೊತೆಗೆ ನಾವೆಲ್ಲ ಇದ್ದೇವೆ ಎಂದು ಭರವಸೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.