Friday, September 29, 2023
spot_img
- Advertisement -spot_img

ಸನಾತನ ಧರ್ಮದ ಚರ್ಚೆಯೇ ಒಂಥರ ಕ್ಯಾನ್ಸರ್ ಇದ್ದ ಹಾಗೆ : ರುದ್ರಪ್ಪ ಲಂಬಾಣಿ

ದಾವಣಗೆರೆ : ನಮ್ಮ ಧರ್ಮ ಶ್ರೇಷ್ಠ ಅಂತ ಎಲ್ಲರಿಗೂ ಗೊತ್ತು, ಯಾರು ಯಾವ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುತ್ತಾರೆ ಅದು ಅವರಿಗೆ ಬಿಟ್ಟಿದ್ದು ಎಂದು ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮದ ಚರ್ಚೆಯೇ ಒಂದು ತರ ಕ್ಯಾನ್ಸರ್ ಇದ್ದ ಹಾಗೆ , ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಾರೆ, ಸನಾತನ ಧರ್ಮದ ಮೇಲೆ ನಾವು ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ, ಆ ನಂಬಿಕೆ ಅದೇ ರೀತಿ ಮುಂದುವರೆಯುತ್ತೆ, ಯಾರಿಗೆ ಯಾವ ಧರ್ಮ ಸೇರಿಕೊಳ್ಳಬೇಕು ಎಂಬ ಸ್ವಾತಂತ್ರ್ಯ ಇದೆ ಅವರವರಿಗೆ ಬೇಕಾದ ಧರ್ಮವನ್ನು ಲೈಕ್ ಮಾಡಬಹುದು, ಅದು ಅವರ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದರು.

ಇದನ್ನು ಓದಿ : Rahul Gandhi : ಯುರೋಪ್ ಸಂಸದರ ಜೊತೆ ರಾಹುಲ್ ಗಾಂಧಿ ದುಂಡು ಮೇಜಿನ ಸಭೆ!

ಇಂಡಿಯಾ ಬದಲಾಗಿ ಭಾರತ ಎಂಬ ನಾಮಕರಣದ ವಿಚಾರವಾಗಿ ಮಾತನಾಡಿದ ಅವರು, ಬೇರೆ ಬೇರೆ ಶಬ್ದಗಳನ್ನು ಅಳವಡಿಸಿಕೊಂಡು ಇಂಡಿಯಾ ಅಂತ ಮಾಡಿದ್ದಾರೆ, ಭಾರತ ನಮ್ಮ ದೇಶ ಅದರ ಬಗ್ಗೆ ಪ್ರಶ್ನೆ ಮಾಡಲ್ಲ, ಅಕ್ಷರಗಳನ್ನ ಹೊಂದಿಸಿ ಒಂದು ಶಬ್ದವನ್ನು ಮಾಡಿಕೊಂಡಿದ್ದಾರೆ ಅದರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಬರ ಘೋಷಣೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಬರ ಘೋಷಣೆ ಗೆ ಉಪ ಸಮಿತಿ ಸರ್ಕಾರ ರಚನೆ ಮಾಡಿದೆ, 196 ತಾಲೂಕುಗಳು ಬರದ ಛಾಯೆಗೆ ಒಳಗಾಗಿವೆ , ಎಲ್ಲಾ ಜಿಲ್ಲಾಧಿಕಾರಿಗಳ ಮುಖಾಂತರ ಸಮೀಕ್ಷೆ ತರಿಸಿಕೊಳ್ಳಲಾಗಿದೆ, ತೀವ್ರ ತರಹ ತಾಲೂಕಿನಲ್ಲಿ ತೊಂದರೆ ಆಗಿದೆ, ಅಂತಹ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗುತ್ತೆ, ಕಳೆದ ತಿಂಗಳು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ಕುಡಿಯುವ ನೀರಿನ ತೊಂದ್ರೆ ಆಗಬಹುದು ಎಂದು ತಿಳಿಸಿದರು.

ಬಿತ್ತಿದ ಬೆಳೆ ಹಾಳಾಗಿದೆ, ಅದು ದನ ಕರುಗಳಿಗೆ ಮೇವು ಆಗಬಹುದು ಅಷ್ಟೇ, ಪಿಕೆಕೆ ಸಂಸ್ಥೆಯಿಂದ ಮೋಡಬಿತ್ತನೆ ಮಾಡಬೇಕು ಎಂದು ಕೆಲವು ಕಡೆ ಬಿತ್ತನೆ ಮಾಡಿದ್ದೇವೆ, ಮಳೆಗಾಗಿ ಕಾಯ್ತಾ ಇದ್ದೇವೆ, ಮಳೆ ಆಗದಿದ್ರೆ ಅನಿವಾರ್ಯವಾಗಿ ಬರ ಘೋಷಣೆ ಮಾಡಬೇಕಾಗುತ್ತೆ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles