ಬೆಂಗಳೂರು: ಕರ್ನಾಟಕದಲ್ಲಿ 3 ಲಕ್ಷ 2 ಸಾವಿರ ಪಿಎಂ ನಿಧಿ ಫಲಾನುಭವಿಗಳು ಇದ್ದಾರೆ, ಅವರಿಗೆ ಸಾಲ ಸೌಲಭ್ಯ ತೊಂದರೆ ಆಗದಂತೆ ಸರಳೀಕರಣ ಯೋಜನೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಾಜ್ಯ ಸಚಿವರಾದ ಡಾ. ಭಗವತ್ ಕಿಶನ್ ರಾವ್ ಕರಾಡ್ ಹೇಳಿದರು.
ಏಳು ರಾಜ್ಯಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೆನರಾ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಲಿದ್ದು, ಸಾಲ ಮೇಳಕ್ಕಾಗಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಬಳಕೆ ಮಾಡಲಾಗುವುದು, ಯೋಜನೆ ಸಕ್ಸಸ್ ಮಾಡಲು ಎಲ್ಲಾ ಹಂತದ ಪ್ರಯತ್ನ ಮಾಡುತ್ತೇವೆ ಎಂದರು.
ಇದನ್ನೂ ಓದಿ : ಚಂದ್ರಯಾನ 3 ಯಶಸ್ವಿ: ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಎಂ.ಬಿ ಪಾಟೀಲ್
ಕರ್ನಾಟಕ ಸರ್ಕಾರ ಸಹ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ರಾಜ್ಯದಲ್ಲಿ ಯೋಜನೆ 68% ರಷ್ಟು ಯಶಸ್ವಿಯಾಗಿದೆ, ತಕ್ಷಣವೇ ಸಾಲ ನೀಡುವಂತೆ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ, ಸಿಬಿಲ್ ಸ್ಕೋರ್ ಕೂಡ ನೋಡದೇ ಸಾಲ ಒದಗಿಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ, ಪಿಎಂ ಸ್ವ ನಿಧಿ ಮೂಲಕ ಸಾಲ ನೀಡಲು ತೀರ್ಮಾನಿಸಲಾಗಿದ್ದು, ಪ್ರತಿ ಬುಧವಾರ ಬೀದಿ ವ್ಯಾಪಾರಿಗಳಿಗೆ ಸಾಲ ಮೇಳ ನಡೆಯಲಿದೆ ಎಂದು ತಿಳಿಸಿದರು.
ಇನ್ನೂ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಪಾಂಡಿಚೇರಿ,ರಾಜ್ಯದ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿಗಳು ಭಾಗಿಯಾಗಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.