Monday, December 11, 2023
spot_img
- Advertisement -spot_img

ಅಕ್ಕಿ ಕ್ವಾಲಿಟಿ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ : ಮಧುಬಂಗಾರಪ್ಪ

ಬೆಂಗಳೂರು: ಅಕ್ಕಿ ಕ್ವಾಲಿಟಿ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ, ಅಕ್ಕಿ ಕೊರತೆ ನಮ್ಮ ಶಾಲೆಗಳಲ್ಲಿ ಇಲ್ಲ, ಹೇಗೆ ಅಕ್ಕಿ ಕ್ವಾಲಿಟಿ ಹೆಚ್ಚಿಸಬಹುದು ಅಂತ ಚರ್ಚೆ‌ ಮಾಡಿದ್ದೇವೆ‌, ಹಿಂದೆ ಒಂದು ಮೊಟ್ಟೆ ಕೊಡ್ತಿದ್ರು, ನಾವು ಬಂದ ಮೇಲೆ ಎರಡು ಮೊಟ್ಟೆ ಕೊಡ್ತಿದ್ದೇವೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ಕಿ ಕೊರತೆಯಾಗಿದ್ದು, ಮಳೆ ಕೈಕೊಟ್ಟ ಹಿನ್ನೆಲೆ ಬರ ಪರಿಸ್ಥಿತಿ ಇದೆ, ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆ ಮಾಡಲಾಗ್ತಿದೆ. ಅಕ್ಕಿ ದಾಸ್ತಾನು ಕೊರತೆಯಾಗಿದೆ. ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವವರೆಗೂ ಬಿಸಿಯೂಟಕ್ಕೆ ಅಕ್ಕಿ ಪೂರೈಕೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಸಚಿವ ಮುನಿಯಪ್ಪಗೆ ಮನವಿ ಮಾಡಲಾಗಿದೆ.

ಫುಡ್ ಡಿಪಾರ್ಟ್‌ಮೆಂಟ್ ಅವರಿಗೆ ಮನವಿ ಮಾಡಿದ್ದೇವೆ, ಮೊಟ್ಟೆ, ಬಾಳೆ ಹಣ್ಣು, ಚಿಕ್ಕಿ ನಾವೇ ಕೊಡ್ತಿದ್ದೇವೆ, ಫುಡ್ ಪ್ರೊಟೀನ್ ಬಗ್ಗೆ ಅಜೆಂಡಾ ಕೊಟ್ಟಿದ್ದೇವೆ, ಆಹಾರದ ಕೊರತೆ ನಮ್ಮ ಇಲಾಖೆಗೆ ಇಲ್ಲ, ಕ್ವಾಲಿಟಿ ಆಫ್ ಫುಡ್ ನೋಡ್ತಿದ್ದೇವೆ, ಅನ್ನ ಸರಿಯಾಗಿ ಬೇಯಿಸಲ್ಲ, ಬೇಳೆ ಸರಿ ಇರಲ್ಲ ಅನ್ನೋದು ಕಂಡುಬರ್ತಿದೆ, ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ, ಇತ್ತೀಚೆಗೆ ಹಲ್ಲಿ ಬಿದ್ದು ಮಕ್ಕಳಿಗೆ ಸಮಸ್ಯೆ ಆಗಿತ್ತು, ಆಗ ಅವರನ್ನ ಸಸ್ಪೆಂಡ್ ಮಾಡೋ ಕೆಲಸ ಮಾಡಿದೆವು, ಬಿಸಿಯೂಟಕ್ಕೆ ವಿವಿಧ ಭಾಗಗಳಿಗೆ ಬೇರೆ ರೀತಿಯಲ್ಲಿ ಇರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸರ್ಕಾರದ ಯೋಜನೆ ಶ್ಲಾಘಿಸಿ ಪತ್ರ ಬರೆದಿದ್ದ ವಿದ್ಯಾರ್ಥಿನಿ ಭೇಟಿಯಾದ ಸಿಎಂ

ಉತ್ತರ ಕರ್ನಾಟಕ ಭಾಗಕ್ಕೆ ಅಲ್ಲಿಯ ರೀತಿ ರೊಟ್ಟಿ ಪಲ್ಯ ಕೊಡ್ತಿದ್ದೇವೆ‌, ಟೊಮೆಟೋ ಬೆಲೆ ಹೆಚ್ಚಳ ಆದಾಗಲೂ ನಿಲ್ಲಿಸದೇ ಕೊಟ್ಟೆವು, ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ಆರೋಪಗಳ ವಿಚಾರವಾಗಿ ಮಾತನಾಡಿ, ನೇರವಾಗಿ ಆರೋಪ ಮಾಡಿಲ್ಲ, ಎಲ್ಲೂ ಕೂಡ ಹೆಸರು ಹೇಳಿಲ್ಲ, ಮಾಧ್ಯಮಗಳಲ್ಲಿ ಮುಂದೆ ಸುದ್ದಿ ಬರದಂತೆ ನೋಡಿಕೊಳ್ಳಬೇಕು, ಸರ್ಕಾರದ ಒಳ್ಳೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ರೆ ಒಳ್ಳೆಯದು ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles