ಬೆಂಗಳೂರು: ಈ ನಾಡಿನ ಅಭಿವೃದ್ಧಿಗಾಗಿ ನಾವು ಒಂದಾಗಬೇಕಿದೆಯೇ ಹೊರತು ನಮ್ಮ ಅಭಿವೃದ್ಧಿಗಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ರಚನೆಯಾದ ನಾಲ್ಕು ವರ್ಷದಲ್ಲಿ ಆಡಳಿತ ವಿರೋಧಿ ಅಲೆ ಇರಲಿದೆ. ಆದರೆ ಈಗ ಸರ್ಕಾರ ರಚನೆಯಾಗಿ ಕೇವಲ 2 ತಿಂಗಳಿಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ ಎಂದಿದ್ದಾರೆ.
ರೈತರ ಉಳಿಸುವ ಭದ್ಧತೆ ಇದ್ರೆ ಅವರನ್ನು ಉಳಿಸಿ, ಅವರ ಭೂಮಿ ಅವರಿಗೆ ಕೊಡಿಸುವ ಕಾರ್ಯ ಮಾಡಿದರೆ ನಿಮ್ಮ ಆಡಳಿತ ಮೆಚ್ಚಿಕೊಳ್ತೇನೆ ಎಂದಿದ್ದಾರೆ. ನಮ್ಮ ಪಕ್ಷ ರೈತರ ಪಕ್ಷ, ಇದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು. ನೈಸ್ ಕಂಪನಿ ವಿಚಾರದಲ್ಲಿ ನಮ್ಮ ಮೇಲೆ ಬೆರಳು ತೋರಿಸಬೇಡಿ. ರೈತರು, ಯೋಜನೆ ಹೆಸರಲ್ಲಿ ಲೂಟಿ ಮಾಡಿದ್ದಾರೆ. ಇದರ ವಿರುದ್ಧವೂ ದೇವೇಗೌಡರು ಹೋರಾಟ ಮಾಡಿದ್ದಾರೆ.
ಇದನ್ನೂ ಓದಿ: ‘ಗ್ಯಾರಂಟಿ’ ಸರ್ಕಾರ ಗುಲಾಮಿ ಮನಸ್ಥಿಯವರು : ಸಿ ಟಿ ರವಿ
ವಿದ್ಯುತ್ ಖರೀದಿ ಮಾಡಿದ್ರೆ ಸರ್ಕಾರಕ್ಕೆ ಹಬ್ಬ, ವಿದ್ಯುತ್ ಖರೀದಿಗೆ ಎಷ್ಟೆಲ್ಲಾ ಕಿಕ್‌ಬ್ಯಾಕ್ ಪಡೀತೀರಿ? ವಿದ್ಯುತ್ ಖರೀದಿಗಾಗಿ ಪ್ರತಿ ತಿಂಗಳು ಒಂದೂವರೆ ಸಾವಿರ ಕೋಟಿ ನೀಡಲು ಮುಂದಾಗಿದ್ದೀರಿ ಇದರಲ್ಲಿ ಎಷ್ಟು ತಗೋತಿರಪ್ಪಾ? ಎಂದು ಟೀಕಿಸಿದ್ದಾರೆ.
ಎಲ್ಲಿದ್ಯಪ್ಪಾ 200 ಯೂನಿಟ್, ಎಲ್ಲಿದ್ಯಪ್ಪಾ ಡಿಕೆ ಶಿವಕುಮಾರ್ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸರಾಸರಿ ಯೂನಿಟ್ ಮೇಲೆ ಉಚಿತ ಅಂತಿದ್ದೀರಿ, ಇದ್ರಲ್ಲಿ 50 ಯುನಿಟ್ ಉಚಿತ ಕೊಟ್ಟಿಲ್ಲ. ಉಚಿತ ಅಕ್ಕಿ ಎಲ್ಲಿ ಕೊಟ್ರಪ್ಪಾ. ಗೃಹಲಕ್ಷ್ಮಿ ಹಣ ಎಲ್ರಿಗೂ ಬಂತಾ? ಇದು ಗ್ಯಾರಂಟಿ ಕಾರ್ಯಕ್ರಮನ? ಇದರ ವಿರುದ್ಧ ನಾವು ಹೋರಾಡುತ್ತೇವೆ ಎಂದರು.
ಇದನ್ನೂ ಓದಿ: ಪಕ್ಷ ಉಳಿಸಲು ದೆಹಲಿಗೆ ಹೋಗಿದ್ದು ನಿಜ; ಭಾವುಕರಾದ ಹೆಚ್‌ಡಿಡಿ
ಜೆಡಿಎಸ್ ಬಿ ಟೀಂ ಅಂತಾರೆ. ನಾವು ಕರ್ನಾಟಕದ ಬಿ ಟೀಂ, ರಾಜ್ಯದ ಎ ಟೀಂ, ನಿಮ್ಮಿಂದ ಪಾಠ ಕಲಿಯಬೇಕಿಲ್ಲ. ಜೆಡಿಎಸ್ ಸಿದ್ಧಾಂತವಿಲ್ಲದ ಪಾರ್ಟಿ ಎನ್ನುತ್ತಿದ್ದಾರೆ. ಬಿಜೆಪಿ ಜೊತೆ ಹೋದವರ ಮತ್ತೆ ಕರೆಯುತ್ತಿದ್ದೀರಲ್ಲ, ಅವರಿಗಾಗಿ ಬಾಗಿಲು ತೆರೆದಿದೆ ಅಂತಿರಲ್ಲ ಹಾಗಾದ್ರೆ ನಿಮ್ಮ ಸಿದ್ಧಾಂತವೇನು? ಎಂದು ಪ್ರಶ್ನಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.