Friday, September 29, 2023
spot_img
- Advertisement -spot_img

ನಮ್ಮ ರೈತರಿಗೆ ನೀರು ಇಟ್ಟುಕೊಂಡೇ, ತಮಿಳುನಾಡಿಗೆ ಬಿಟ್ಟಿದ್ದೆವು: ಕಾರಜೋಳ

ಬೆಂಗಳೂರು: ‘ನಮ್ಮ ಕಾಲದಲ್ಲಿ ತಮಿಳುನಾಡಿಗೆ ನೀರು ಬಿಟ್ಟ ದಾಖಲೆ ಇದ್ದರೆ ಅದನ್ನು ಬಿಡುಗಡೆ ಮಾಡಲಿ; ನಮ್ಮ ರೈತರಿಗೆ ನೀರು ಇಟ್ಟುಕೊಂಡೇ, ತಮಿಳುನಾಡಿಗೆ ಬಿಟ್ಟಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ರೈತರು ಏನು ಪ್ರತಿಭಟನೆ ಮಾಡಿದ್ರಾ? ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಡಿಸಿಎಂ ಡಿಕೆ ಶಿವಕುಮಾರ್‌ಗೆ ತಿರುಗೇಟು ಕೊಟ್ಟರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಕಾರಜೋಳ, ‘ಸುಮ್ಮನೆ ರಾಜಕೀಯಕ್ಕಾಗಿ ಏನೋ ಮಾತಾಡೋದು ಸರಿಯಲ್ಲ, ಡಿಕೆ ಶಿವಕುಮಾರ್ ಅದೇನೋ ಬಿಚ್ಚಿಡ್ತಾರೋ ಬಿಚ್ಚಿಡಲಿ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರೈತರ ಬಗ್ಗೆ ಹಾಗೂ ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಕೊಡ್ತಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬರ್ತಿದ್ದಾರೆ. ಮುಂಗಾರು ಮಳೆ ಕೊರತೆಯಾದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಎಂದು ಎಚ್ಚೆತ್ತುಕೊಳ್ಳಬೇಕಿತ್ತು. ಸಿಡಬ್ಲು ಎಂ ಎ ಮತ್ತು ಸಿಡಬ್ಲು ಆರ್ ಸಿ ಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ; 250ಕ್ಕೂ ಹೆಚ್ಚು ಟ್ರಕ್ ನಿಲ್ಲಿಸಿ ಪ್ರತಿಭಟನೆ; ಶಾಂತಿನಗರದಲ್ಲಿ ಟ್ರಾಫಿಕ್ ಜಾಮ್!

‘ಈಗಾಗಲೇ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದೆ. ಮೊದಲು 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇ ತಪ್ಪು. ಆಗಲೇ ಎಚ್ಚೆತ್ತು ಕಾನೂನು ಹೋರಾಟಕ್ಕೆ ಸಿದ್ಧವಾಗಬೇಕಿತ್ತು. ಕಾವೇರಿ ಜಲಾನಯದ ಹಲವು ಹಳ್ಳಿಗಳು, ಬೆಂಗಳೂರು ನಗರ ಕಾವೇರಿ ನೀರಗೆ ಅವಲಂಬಿತವಾಗಿವೆ. ಈಗಲೂ ರಾಜ್ಯ ಸರ್ಕಾರ ತಮ್ಮ ಕಾನೂನು ತಂಡವನ್ನು ಸಿದ್ದಮಾಡಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನೀರು ಹರಿಸುವುದನ್ನ ನಿಲ್ಲಿಸಲಿ’ ಎಂದು ಹೇಳಿದರು.

ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ಇರಲಿದೆ

‘ಕಾಂಗ್ರೆಸ್ ಸರ್ಕಾರದ್ದು ಹೊಡೆದು ಆಳುವ ನೀತಿ. ಪ್ರತಿಪಕ್ಷದಲ್ಲಿ ಇದ್ದಾಗ ಮೇಕೆದಾಟು ಪಾದಯಾತ್ರೆ ಮಾಡಿದ್ರು, ಇವರದ್ದು ಇಬ್ಬಗೆಯ ನೀತಿ, ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ಸಹಾಯ ಮಾಡುತ್ತಿದ್ದಾರೆ. ಪ್ರತಿಪಕ್ಷ ಇದ್ದಾಗ ರಾಜ್ಯದ ರೈತರ ಪರವಾಗಿ ವೀರಾವೇಷದಲ್ಲಿ ಮಾತಾಡಿ, ಈಗ ಜನರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮಳೆ ಕೊರತೆಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ವಿದ್ಯುತ್ ಕೂಡ ಸಮರ್ಪಕವಾಗಿ ಕೊಡುತ್ತಿಲ್ಲ’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles