ಬೆಂಗಳೂರು: 40 ವರ್ಷ ಈ ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷ ಉಳಿಸಲು ದೆಹಲಿ ಹೋಗಿದ್ದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಭಾವುಕರಾಗಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ, ದೇವೇಗೌಡರ ಬಗ್ಗೆ ಮಾತನಾಡಲು ಅವರಿಗೇನು ಯೋಗ್ಯತೆ ಇದೆ ಎಂದಿದ್ದಾರೆ.
ಪ್ರಧಾನಿ ಮೋದಿಯವರು ಆವತ್ತು ರಾಜೀನಾಮೆ ಕೊಡು ನಾಳೆ ಸಿಎಂ ಮಾಡ್ತೀವಿ, ಜೀವನಪರ್ಯಂತ ಸಿಎಂ ಮಾಡ್ತೀವಿ ಎಂದು ಕುಮಾರಸ್ವಾಮಿಗೆ ಹೇಳಿದ್ರು. ಬಿಹಾರ ಸಿಎಂ ನಿತೀಶ್ ಕುಮಾರ್ ಅಂತೆ ನಿಮ್ಮನ್ನು ಸಿಎಂ ಮಾಡುವುದಾಗಿ ಹೇಳಿದ್ರು. ಆದ್ರೆ ಕುಮಾರಸ್ವಾಮಿ ನಮ್ಮ ತಂದೆಗೆ ಆರೋಗ್ಯ ಸರಿ ಇಲ್ಲ, ಹಿಂದೆ ಮಾಡಿದ ನೋವು ಈಗ ಮಾಡಲ್ಲ ಎಂದರು. ಇದನ್ನು ನಾನು ಬಹಿರಂಗವಾಗಿಯೇ ಹೇಳುತ್ತಿದ್ದೇನೆ ಎಂದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸುತ್ತೇನೆ : ಸುನೀಲ್ ಕುಮಾರ್
ಸಿದ್ದರಾಮಯ್ಯ ಮನೆಗೆ ಬಂದಾಗ ಸಹಕರಿಸಿ ಅಂದಿದ್ದೆ. ನಾಡಿನ ಹಕ್ಕನ್ನು ಬಿಟ್ಟುಕೊಟ್ಟು ರಾಜಕೀಯ ಮಾಡಲ್ಲ. ಕೃಷ್ಣ ,ಕಾವೇರಿ ಯಾವುದೇ ವಿಚಾರ ಆಗಲಿ ನಾಡಿನ ಜನರ ಜೊತೆ ಪಕ್ಷ ಇರಲಿದೆ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಪಕ್ಷ ಮುಂದುವರೆಯಲಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.