ಮೈಸೂರು : ನೀವು ಮನೆ ಬಾಗಿಲಿಗೆ ಬಂದು ಬೇಡಿಕೊಂಡಿದ್ದಕ್ಕೆ ವೋಟ್ ಹಾಕಿರೋದು, ನಿಮ್ಮ ಗ್ಯಾರಂಟಿಗಲ್ಲ ಎಂದು ನಗರದ ರೈತ ಪರ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಫೋಟೋವನ್ನು ಸುಟ್ಟು ಹಾಕುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ರೈತ ಮುಖಂಡ, ಸಿದ್ದರಾಮಯ್ಯ ಅವರು ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಮಾಡಿರೋದು, ತಮಿಳುನಾಡಿಗೆ ಹೋಗಿ ನೀರು ತರ್ಲಿ ಅಂತಾನಾ, ನಿಮ್ಮ ಗ್ಯಾರಂಟಿಯೆಲ್ಲ ನಮಗೆ ಬೇಕಾಗಿಲ್ಲ. ನಿಮ್ಮ ಗುಲಾಮರಂತೆ ಕೆಲಸ ಮಾಡ್ತೇವೆ ಅಂತ ಮನೆ ಬಾಗಿಲಿಗೆ ಬಂದು ಬೇಡಿಕೊಂಡ್ರಲ್ಲ ಅದಕ್ಕೆ ವೋಟ್ ಹಾಕಿ ಗೆಲ್ಲಿಸಿರೋದು ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.


ಇದನ್ನೂ ಓದಿ : ಕಾವೇರಿ ಕಿಚ್ಚು : ಅರೆಬೆತ್ತಲೆಯಾಗಿ ಕತ್ತೆ ಮೆರವಣಿಗೆ ಮಾಡಿದ ರೈತರು
ಕಾವೇರಿ ನೀರು ಪ್ರಾಧಿಕಾರದ ಸೂಚನೆಗೆ ತಲೆ ಬಾಗಿದ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪ್ರತಿದಿನ 5 ಸಾವಿರ ಕ್ಯೂಸೆಕ್ನಂತೆ ಮುಂದಿನ 28 ನೇ ದಿನಾಂಕದವರೆಗೂ ನೀರು ಹರಿಸುವಂತೆ ಕಾವೇರಿ ನೀರು ಪ್ರಾಧಿಕಾರ ಸರ್ಕಾರಕ್ಕೆ ಸೂಚನೆ ನೀಡಿದೆ. ಪ್ರಾಧಿಕಾರದ ಸೂಚನೆ ಹಿನ್ನೆಲೆ ರಾಜ್ಯದ ಜನತೆಯ ವಿರೋಧದ ನಡುವೆಯೂ ಅಧಿಕಾರಿಗಳು ಕಾವೇರಿ ನದಿಗೆ ನೀರು ಹರಿಬಿಟ್ಟಿದ್ದಾರೆ. ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಬಂದ ಹಿನ್ನೆಲೆಯಲ್ಲಿ ಅನ್ನದಾತರು ಹಾಗೂ ರೈತ ಪರ ಹೋರಾಟಗಾರರು ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ : Cauvery Water : ಕಾವೇರಿ ನೀರಿಗಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ತಮಿಳುನಾಡು ಎಂಪಿಗಳು
ಹೋರಾಟದ ಕಿಚ್ಚು ತೀವ್ರ ಗತಿಯಲ್ಲಿ ಪಸರಿಸುತ್ತಿದಂತೆ ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಕೋಪಗೊಂಡ ಹೋರಾಟಗಾರರು ಪೊಲೀಸ್ ವಾಹನದಲ್ಲಿಯೇ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.