ವಿಜಯಪುರ : ಇಂದು ನಾನು, ಡಿ.ಕೆ.ಶಿವಕುಮಾರ್‌ರವರು ಇತರ ಸಚಿವರು ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು, ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯದ ಬರ ಕುರಿತು ಚರ್ಚೆ ಮಾಡಲಾಗಿದೆ ಎಂದರು. ಜಂಟಿ ಸರ್ವೆ ಮಾಡಲಾಗಿದೆ, 113 ತಾಲೂಕುಗಳಲ್ಲಿ ಬರವಿದೆ, ಇನ್ನೂ 73 ಕಡೆ ಬರ ಇದೆ ಎಂಬ ಮಾಹಿತಿ ಇದೆ ಅಂತಾ ಗೊತ್ತಾಗಿದ್ದು ಅಲ್ಲಿ ಜಂಟಿ ಸರ್ವೆ ಮಾಡಲಾಗುತ್ತದೆ, ಸೆಪ್ಟೆಂಬರ್ 4 ರಂದು ಸಭೆ ನಡೆಯಲಿದೆ, ಸಭೆಯಲ್ಲಿ ಎಷ್ಟು ತಾಲೂಕು ಬರ ಎಂದು ಘೋಷಣೆ ಮಾಡಲಾಗುತ್ತದೆ, ಜಂಟಿ ಸರ್ವೇ ಮುಗಿದ ಬಳಿಕ ಎಷ್ಟು ತಾಲೂಕುಗಳಲ್ಲಿ ಬರ ಇದೆ ಎಂದು ಘೋಷಿಸಲಾಗುತ್ತದೆ ಎಂದು ತಿಳಿಸಿದರು.
ಬರ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ, ನೀರಾವರಿಗಾಗಿ ಬಜೆಟ್‌ನಲ್ಲಿ ಇಪ್ಪತ್ತೊಂದು ಕೋಟಿ ಇಡಲಾಗಿದೆ, ಭದ್ರಾ ಯೋಜನೆಗೆ 5300 ಕೋಟಿ ಕೇಂದ್ರದಿಂದ ಬರಬೇಕು, ಆದರೆ ಕೇಂದ್ರ ಈವರೆಗೂ ಹಣ ನೀಡಿಲ್ಲ, ಯುಕೆಪಿಗೆ 1200 ಮಾತ್ರ ಇಡಲಾಗಿದೆ, ತೆಲಂಗಾಣ, ಆಂಧ್ರ ಕ್ಯಾತೆ ತೆಗೆದಿದೆ, ಹಾಗಾಗಿ ಇದೇ ನೆಪದಿಂದ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ, ಹಾಗಾಗಿ ಮೂರನೇ ಹಂತದ ಯೋಜನೆಗೆ ಅಡ್ಡಿಯಾಗಿದೆ ಎಂದರು.
ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, 5000 ಕ್ಯೂಸೆಕ್ ನೀರು ಬಿಡಲು ಆದೇಶ ಆಗಿದೆ, ತಮಿಳುನಾಡು 24000 ಕ್ಯೂಸೆಕ್ ಬಿಡಲು ಒತ್ತಾಯಿಸಿತ್ತು, ಮಹದಾಯಿ ಯೋಜನೆ ಕಾಮಗಾರಿಗೆ ಮೇಕೆದಾಟು ಯೋಜನೆ ಕಾಮಗಾರಿ ಶೀಘ್ರವೇ ಆರಂಭಿಸುತ್ತೇವೆ ಎಂದರು.
ಆದಿತ್ಯ ಎಲ್ 1 ಉಡಾವಣೆ ವಿಚಾರವಾಗಿ ಮಾತನಾಡಿ, ಆದಿತ್ಯ ಎಲ್ 1 ಉಡಾವಣೆ ಇಡೀ ಯೋಜನೆ ಯಶಸ್ವಿಯಾಗಲಿ ಎಂದು ಸಿಎಂ ಹಾರೈಸಿದರು.
ಇದನ್ನೂ ಓದಿ : ನಟ ಸುದೀಪ್ ಬರ್ತ್ ಡೇ : ಶುಭ ಕೋರಿದ ರಾಜಕೀಯ ಗಣ್ಯರು
ಇನ್ನೂ ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರವಾಗಿ ನಮ್ಮ ಸರ್ಕಾರದಲ್ಲಿ ಮೊದಲು ಕುಡಿಯುವ ನೀರು ಹಾಗೂ ರೈತರನ್ನು ಬದುಕಿಸಲು ಆದ್ಯತೆ ಕೊಡುತ್ತೇವೆ, ಈಗಾಗಲೇ ಕೃಷ್ಣಾ ನ್ಯಾಯಾಧೀಕರಣ ಮುಂದೆ ನಮ್ಮ ವಕೀಲರು, ಅಧಿಕಾರಿಗಳ ತಂಡದಿಂದ ವಾದ ಮಂಡಿಸುತ್ತೇವೆ ಇದಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಆದರೂ ನಮ್ಮ ಆದ್ಯತೆ ರೈತರ ಹಿತವಾಗಿದೆ ಎಂದು ತಿಳಿಸಿದರು.
ಈ ಬಾರಿ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ 11 ರಿಂದ 12 ಟಿ.ಎಮ್.ಸಿ. ಕಡಿಮೆಯಾಗಿದೆ ಆದರೂ ರೈತರ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಮುಳುಗಡೆಯಾಗುವ ಹಳ್ಳಿಗಳ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಇವತ್ತು ಕೃಷ್ಣಾ ಕೊಳ್ಳದ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.