ಮುಂಬೈ: 2024ರ ಚುನಾವಣೆ ಬಳಿಕ ಸರ್ಕಾರ, ದೇಶದ ಪ್ರಧಾನಿಯನ್ನು ಬದಲಾಯಿಸುತ್ತೇವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ. ಜಲಗಾಂವ್‌ನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, I.N.D.I.A ಮೈತ್ರಿಯು ದೇಶವನ್ನು ಪ್ರೀತಿಸುವವರದ್ದು, ನಮಗೆ ಯಾರ ಸವಾಲು ಇಲ್ಲ ಎಂದುಕೊಂಡಿದ್ದ ಬಿಜೆಪಿಗೆ ಈಗ ಸಾಮಾನ್ಯ ಜನರ ಸವಾಲು ಎದುರಾಗಿದೆ ಎಂದಿದ್ದಾರೆ.
ಮೈತ್ರಿಕೂಟದಿಂದ ಅವರೀಗ ಸಮಸ್ಯೆಗೆ ಸಿಲುಕಿದ್ದಾರೆ ಹೀಗಾಗಿ ದೇಶದ ಹೆಸರು ಬದಲಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. I.N.D.I.A ನಮ್ಮದು, ಭಾರತವೂ ನಮ್ಮದು, ಹಿಂದೂಸ್ತಾನ ಸಹ ನಮ್ಮದು ಎಂದಿದ್ದಾರೆ. ಇಷ್ಟು ದಿನ ನೀವು ನಮ್ಮ ಸ್ನೇಹವನ್ನು ನೋಡಿದ್ದೀರಿ. ಆದರೆ ಮಹಾರಾಷ್ಟ್ರದಲ್ಲಿ ಇನ್ನುಮುಂದೆ ಉರಿಯುವ ಜ್ಯೋತಿಯನ್ನು ನೋಡುತ್ತೀರಿ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ‘ಭಾರತ್’ ಹೆಸರು ಇಷ್ಟವಾಗದಿದ್ದರೆ ದೇಶ ಬಿಟ್ಟು ತೆರಳಬಹುದು’
ಮುಂದಿನ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿಯಾಗುತ್ತಿರುವ ಸಂಬಂಧ ಮಾತನಾಡಿದ ಅವರು, ನಾವು 25 ವರ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು ಆದರೆ ನಾವು ಬಿಜೆಪಿಯಾಗಿ ಬದಲಾಗಲಿಲ್ಲ. ಮುಂದೆಯೂ ಯಾವುದೇ ಪಕ್ಷವಾಗಿ ನಾವು ಬದಲಾಗಲ್ಲ ಶಿವಸೇನೆ ಒಂದೇ ಪಕ್ಷ, ಆ ಪಕ್ಷದಡಿಯಲ್ಲೇ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.