ಚಿಕ್ಕೋಡಿ : ನೂರು ದಿನಗಳ ಹಿಂದೆ ನಾವು ಐದು ಗ್ಯಾರಂಟಿ ನಿಮ್ಮ ಬಾಗಿಲಿಗೆ ಮುಟ್ಟಿಸುವ ಪ್ರಮಾಣ ಮಾಡಿದ್ದೇವು, ಇಂದು ಆ ಕೆಲಸ ಮಾಡ್ತಿದ್ದು, ಸರ್ಕಾರ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ ಎಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬಹುಶಃ ಇಂದು ರಕ್ಷಾ ಬಂಧನ ದಿನ ನಿಮಿತ್ತ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಐದು ಗ್ಯಾರಂಟಿಗಳಿಂದ ಸುಮಾರು 80 ಸಾವಿರ ಕೋಟಿ ನೇರವಾಗಿ ಜನರಿಗೆ ತಲುಪಿಸುವ ಪ್ರಾಮಾಣಿಕ ವ್ಯವಸ್ಥೆ ಮಾಡಲಾಗ್ತಿದೆ,
ಇಂದೇ ನಿಮ್ಮ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಆಗುತ್ತೆ, ಶೇ. 96ರಷ್ಟು ಫಲಾನುಭವಿಗಳು ಗೃಹಲಕ್ಷ್ಮೀ ಅರ್ಜಿ ಸಲ್ಲಿಸಿದ್ದಾರೆ, ಇಂದು ರಕ್ಷಾಬಂಧನ ಇದ್ದು ನಾನು ನಿಮ್ಮ ಮನೆಮಗನಾಗಿ, ತಮ್ಮನಾಗಿ ಕೆಲಸ ಮಾಡ್ತೀನಿ ಎಂದರು.
ಐದು ವರ್ಷದೊಳಗೆ ಚಿಕ್ಕೋಡಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇವೆ, ಚಿಕ್ಕೋಡಿಯಲ್ಲಿ ಅಂಡರ್‌ಗ್ರೌಂಡ್ ಕೇಬಲ್ ವ್ಯವಸ್ಥೆ ಮಾಡ್ತೇವೆ, ಚಿಕ್ಕೋಡಿ ಪುರಸಭೆಗೆ 20 ಕೋಟಿ ಅನುದಾನ ತಂದು ಬಡಾವಣೆಗಳ ಅಭಿವೃದ್ಧಿ ಮಾಡ್ತೀವಿ, ಐದು ಕೋಟಿ ವೆಚ್ಚದಲ್ಲಿ ಚಿಕ್ಕೋಡಿಯಲ್ಲಿಈ -ಗ್ರಂಥಾಲಯ ಮಂಜೂರು ಮಾಡಿಸುವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ; ‘ಗೃಹಲಕ್ಷ್ಮಿ’ಯಲ್ಲಿ ನ್ಯೂನತೆ ಕಾಣ್ತಿಲ್ಲ; ದೊಡ್ಡವರು ಏನ್ ಬೇಕಾದ್ರೂ ಮಾತಾಡ್ಲಿ: ಸೋಮಶೇಖರ್
ಲೋಕಸಭೆ ಎಲೆಕ್ಷನ್ ಮುಗಿದ ಬಳಿಕ ಹೊಸ ಜಿಲ್ಲೆ ಘೋಷಣೆ ಮಾಡ್ತಾರೆ, ಮೊದಲನೇ ಆದ್ಯತೆ ಚಿಕ್ಕೋಡಿಗೆ ನೀಡುತ್ತಾರೆ, ಚಿಕ್ಕೋಡಿ ಜಿಲ್ಲೆ ಆಗುತ್ತೆ ಎಂದು ತಿಳಿಸಿದರು. ಚಿಕ್ಕೋಡಿ – ಕಾಗವಾಡ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು, ಈಗಾಗಲೇ ಪ್ರಕಾಶ್ ಹುಕ್ಕೇರಿ ದೆಹಲಿಗೆ ಹೋಗಿ ಕೇಂದ್ರ ಸಚಿವರ ಭೇಟಿಯಾಗಿದ್ದಾರೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.