ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯ ಮುಖ್ಯ, ಸರ್ಕಾರದ ಬಗ್ಗೆ ವಿಚಾರ ಮುಟ್ಟಿಸುವ ಕೆಲಸ ಆಗಬೇಕು ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಸರಿ ತಪ್ಪು ಬಗ್ಗೆ ಮಾಹಿತಿ ನೀಡಬೇಕು, ಇತ್ತೀಚೆಗೆ ಹೊಸ ಸ್ಟ್ರಾಟಜಿ ಶುರುವಾಗಿದೆ, ಕೆಲವರಿಂದ ಅಪಪ್ರಚಾರ ಶುರುವಾಗಿದೆ, ಕೆಲವು ಸಂಸ್ಥೆ ಹಾಗೂ ಪಕ್ಷಗಳು ಅಪಪ್ರಚಾರ ಉದ್ದೇಶ ಪೂರ್ವಕವಾಗಿದೆ, ಸತ್ಯವನ್ನು ತಿರುಚಿ ತಿಳಿಸಲಾಗ್ತಿದೆ, ಜ.23 ರಿಂದ ಇತ್ತೀಚಿನ ಸಮೀಕ್ಷೆ ಪ್ರಕಾರ 60 ಕೋಟಿ ಅಂತರ್ಜಾಲ ಬಳಸುವವರಿದ್ದಾರೆ, 78% ಜನರಲ್ಲಿ ಕೋಮುದ್ವೇಷ ಬರಲು ಸುಳ್ಳು ಸುದ್ದಿಯೇ ಕಾರಣ ಎಂದರು.
ಇದನ್ನೂ ಓದಿ: ಪಾಕಿಸ್ತಾನ ಛಿದ್ರವಾದಾಗ ಭಯೋತ್ಪಾದಕ ದಾಳಿಗಳು ಕೊನೆಯಾಗುತ್ತೆ; ವಿ.ಕೆ ಸಿಂಗ್
ಫ್ಯಾಕ್ಟ್ ಚೆಕ್ ಗಾಗಿ ಕಮಿಟಿ ರಚನೆ ಮಾಡ್ತೇವೆ, ಅನಾಲಿಸಿಸ್ ಟೀಂ ಪರಿಶೀಲನೆ- ಮೇಲ್ವಿಚಾರಣೆ- ವರದಿ ಟೀಂ, ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ಯಾಪಾಸಿಟಿ ಬ್ಯುಲ್ಡ್ ಟೀಂ ರಚಿಸ್ತೇವೆ ಎಂದು ಮಾಹಿತಿ ನೀಡಿದರು.
ಫೇಕ್ ನ್ಯೂಸ್ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಚಾರಗಳ ಬಗ್ಗೆ ಪ್ರಕರಣ ದಾಖಲಿಸಲಾಗುವುದು, ಫ್ಯಾಕ್ಟ್ ಚೆಕ್ ಬಗ್ಗೆ ಯಾರಿಗೂ ಆತಂಕ ಬೇಡ, ಯಾರನ್ನೂ ಕಟ್ಟಿಹಾಕುವ ಪ್ರಯತ್ನ ಅಲ್ಲ, ಯಾರನ್ನೂ ನಿರ್ಬಂಧಿಸುವ ಕೆಲಸ ಅಲ್ಲ, ಸುಳ್ಳು ಸುದ್ದಿ ಹರಡದಂತೆ ನಿಗಾವಹಿಸುವುದು ಅಷ್ಟೇ, ಫ್ಯಾಕ್ಟ್ ಚೆಕ್ ಬಗ್ಗೆ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲಾಗುವುದು, ಸರ್ಕಾರದ ಹಂತದಲ್ಲೂ ಪರಿಶೀಲನೆ ಮಾಡುತ್ತೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.