Monday, March 27, 2023
spot_img
- Advertisement -spot_img

ಬೆಂಗಳೂರಿನಂತೆ ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು : ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಉತ್ಸವ ಯಶಸ್ಸು ಕಂಡಿರುವುದು ಜನರ ಮೇಲೆ ತಮಗೆ ಧನ್ಯತಾಭಾವ ಮೂಡಿಸಿದೆ. ದಸರಾ ರೀತಿಯಲ್ಲಿ ಉತ್ಸವ ಮಾಡಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಉತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿರುವುದು ಸಂತಸ ತಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಪೂರೈಸಿದ್ದು, ಮುಂದಿನ 5 ವರ್ಷಗಳಲ್ಲಿ ಬೆಂಗಳೂರಿಗೆ ಸಮಾನವಾಗಿ ಜಿಲ್ಲಾಕೇಂದ್ರವಾಗಿ ಅಭಿವೃದ್ಧಿಯ ಸ್ಪರ್ಶ ನೀಡಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.

ಇತಿಹಾಸ ನಿರ್ಮಿಸುವ ಕೆಲಸವಾಗಿದೆ, ಇನ್ನೇನಿದ್ದರೂ ಭವಿಷ್ಯ ಕಟ್ಟುವ ಕೆಲಸವಾಗಲಿದೆ, ಇತರೆ ಉತ್ಸವಗಳಿಗಿಂತ ಕಳಪೆ ಇರಬಾರದು, ಗುಣಮಟ್ಟ ಕಾಯ್ದುಕೊಳ್ಳಬೇಕು ಎಂಬ ಅನಿಸಿಕೆ ಇತ್ತು ಅದು ಈಡೇರಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಕುರಿತು ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಇಷ್ಟರಲ್ಲೇ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್​ಗಳು ಸಂಚರಿಸಲಿವೆ ಎಂದು ಹೇಳಿದರು.

ಸದ್ಗುರು ಇಶಾ ಆಶ್ರಮ ನಿರ್ಮಾಣಕ್ಕೆ ನಾನು ಯಾವುದೆ ರೀತಿ ಸಹಕಾರ ಬೆಂಬಲ ಕೊಡುತ್ತೇನೆ. ಬೇರೆ ಯಾರೆ ಸಾದು ಸಂತರು ಬರುವುದಾದರೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ನಮಗೆ ನಮ್ಮ ಕ್ಷೇತ್ರ ನಮ್ಮ ಜನ ಅಭಿವೃದ್ದಿಯಾಗಬೇಕು ಎಂದು ಹೇಳಿದರು.

Related Articles

- Advertisement -

Latest Articles