Wednesday, March 22, 2023
spot_img
- Advertisement -spot_img

ಸಿದ್ದರಾಮಯ್ಯ ಜೀವಂತ ಇರೋವಾಗಲೇ ಬಿಜೆಪಿ ಸೇರಿಸಲ್ಲ, ಇನ್ನು ಹೆಣ ತಗೊಂಡು ಏನು ಮಾಡೋದು?: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ಜೀವಂತ ಇದ್ದಾಗಲೇ ಬಿಜೆಪಿ ಸೇರಿಸಲ್ಲ. ಇನ್ನು ಅವರ ಹೆಣ ತಗೊಂಡು ಏನು ಮಾಡೋದು. ಅವರ ಹೆಣ ನಾಯಿ ಕೂಡ ಮೂಸಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಾನಲ್ಲ, ನನ್ನ ಹೆಣನೂ ಬಿಜೆಪಿಗೆ ಹೋಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಹೆಣ ಇನ್ನು ನಾವೇಕೆ ಮುಟ್ಟೋಣ, ಆಡಳಿತ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರ ಬಗ್ಗೆ ಹುಚ್ಚುಹುಚ್ಚಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮ್ಯಯನವರಿಗೆ ಘನತೆಯಲ್ಲ ಎಂದರು. ಸಿದ್ದರಾಮಯ್ಯ ಹಣೆಬರಹ ಮತದಾರರಿಗೆ ಗೊತ್ತು. ಈ ಮನುಷ್ಯ ನಂಬಿಕಸ್ತ ಅಲ್ಲ, ಸುಧಾರಿಸಲ್ಲ ಅಂತ. ಚುನಾವಣೆಯಲ್ಲಿ ಸೋಲಿಸ್ತಾರೆ ಎಂಬ ಒಂದೇ ಕಾರಣಕ್ಕೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದರು.

ಸುಮಲತಾ ಬಗ್ಗೆ ರಾಷ್ಟ್ರೀಯ ನಾಯಕರು ವಿಚಾರ ಮಾಡುತ್ತಾರೆ. ಅವರ ಬಗ್ಗೆ ರಾಷ್ಟ್ರೀಯ ನಾಯಕರು ವಿಚಾರ ಮಾಡ್ತಾರೆ. ಇವತ್ತಲ್ಲ ನಾಳೆ, ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಬಿಟ್ರೆ ಬೇರೆ ಪಕ್ಷ ಅಧಿಕಾರಕ್ಕೆ ಬರಲ್ಲ. ಈ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

- Advertisement -

Latest Articles