ಧಾರವಾಡ : ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಎಂಐಎಂ ಪಕ್ಷದವರು ಟಿಪ್ಪು ಜಯಂತಿಗಾಗಿ ಅರ್ಜಿ ಕೊಟ್ಟಿದ್ದಾರೆ. ಇದಕ್ಕೆ ನಾನು ವಿರೋಧಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಪಾಲಿಕೆಯವರು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡುತ್ತೇವೆ. ಅಕಸ್ಮಾತ್ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು . ಟಿಪ್ಪು ಮತಾಂತರ ಮಾಡಿದ ವ್ಯಕ್ತಿ, ದೇವಸ್ತಾನ ಕೆಡವಿದ ವ್ಯಕ್ತಿ, ಸಾವಿರಾರು ಜನರನ್ನು ಕೊಂದಿರುವ ವ್ಯಕ್ತಿ ಹಾಗೂ ಕನ್ನಡ ವಿರೋಧಿ. ಇಂತಹ ವ್ಯಕ್ತಿಯ ಜಯಂತಿಯನ್ನ ಚನ್ನಮ್ಮ ಮೈದಾನದಲ್ಲಿ ಆಚರಣೆ ಮಾಡಲು ಬಿಡಲ್ಲ , ಅಲ್ಲಾ ಒಬ್ಬನೇ ದೇವರು ಎಂದು ಕುರಾನ್‌ನಲ್ಲಿ ಹೇಳಲಾಗಿದೆ.
ನೂರಕ್ಕೆ ಶೇ.90 ರಷ್ಟು ಮುಸ್ಲಿಮರು ಇದನ್ನೇ ಪಾಲಿಸುತ್ತ ಬಂದಿದ್ದಾರೆ. ಇನ್ನೊಬ್ಬನ ಪೂಜೆ, ಆರಾಧನೆ ಪದ್ಧತಿ ಇಲ್ಲ. ಎಂಐಎಂ, ಎಸ್‌ಡಿಪಿಐ, ಪಿಎಫ್‌ಐ ಕಿಡಿಗೇಡಿಗಳು ದ್ವೇಷದ ಭಾವನೆಯಿಂದ ಇದನ್ನ ಮಾಡುತಿದ್ದಾರೆ. ಟಿಪ್ಪು ಜಯಂತಿ ಸರಿಯಲ್ಲ, ಟಿಪ್ಪುಗೆ ಒಳ್ಳೆತನ ಇರಲಿಲ್ಲಾ ಎಂದು ಹೇಳಿದರು.ಟಿಪ್ಪು ಜಯಂತಿ ಸಂಘರ್ಷಕ್ಕೆ ಕಾರಣ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
ಟಿಪ್ಪು ಮತಾಂತರ ಮಾಡಿದ ವ್ಯಕ್ತಿ, ದೇವಸ್ತಾನ ಕೆಡವಿದ ವ್ಯಕ್ತಿ, ಸಾವಿರಾರು ಜನರನ್ನು ಕೊಂದಿರುವ ವ್ಯಕ್ತಿ ಹಾಗೂ ಕನ್ನಡ ವಿರೋಧಿ. ಇಂತಹ ವ್ಯಕ್ತಿಯ ಜಯಂತಿಯನ್ನ ಚನ್ನಮ್ಮ ಮೈದಾನದಲ್ಲಿ ಆಚರಣೆ ಮಾಡಲು ಬಿಡಲ್ಲ ಎಂದರು.