ಬೀದರ್: ರಾಜ್ಯದಲ್ಲಿ ಈ ಬಾರಿ 25% ರಷ್ಟು ಮಳೆಯ ಕೊರತೆಯಾಗಿದೆ, ಕೇಂದ್ರ ಸರ್ಕಾರದ ಸೂಚನೆಯ ಪ್ರಕಾರ ಆಗಸ್ಟ್ 31 ರ ಒಳಗೆ ಸಮೀಕ್ಷೆ ಮಾಡಿ ವರದಿ ಕಳಿಸುತ್ತೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಮಾನದಂಡ ಅನ್ವಯ ಬರಗಾಲ ಘೋಷಣೆ ತೀರ್ಮಾನ ಮಾಡ್ತೇವೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಬಗ್ಗೆ ನಿರ್ಧರಿಸ್ತೇವೆ, ಅಂದಿನ ಮಳೆಯ ಮಾಹಿತಿ, ಹವಾಮಾನ ನೋಡಿ ನಿರ್ಧರಿಸ್ತೇವೆ ಎಂದರು.
ನಾವು ಕೇಂದ್ರ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗುತ್ತೆ, ಹೀಗಾಗಿ ಸದ್ಯ ಪರಿಹಾರ ಇಲ್ಲ, ಸಮೀಕ್ಷೆಯ ಬಂದ ಮೇಲೆ ಹೇಳಬಹುದು…ರಾಜ್ಯದ 113 ತಾಲೂಕಿನಲ್ಲಿ ಮಳೆಯ ಕೊರತೆ ಇದೆ ಎಂದು ಕೇಂದ್ರ ಮಾಹಿತಿ ನೀಡಿದೆ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.