ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ 130ರಿಂದ 140 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿಯ 18 ಕ್ಷೇತ್ರಗಳಲ್ಲಿ 12 ಸೀಟ್ ಗೆದ್ದೆ ಗೆಲ್ಲುತ್ತೇವೆ ಎಂದು ಅಭಿಪ್ರಾಪಟ್ಟರು. ಕರಾವಳಿ ಭಾಗದಿಂದ ಕಲ್ಯಾಣ ಕರ್ನಾಟಕದವರೆಗೆ ನಮಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ಚುನಾವಣೆಯಲ್ಲಿ ನಾವು 130-140 ಸೀಟ್ ಗೆಲ್ಲುತ್ತೇವೆ. ಈ ಸಂಬಂಧ ನಾನು ಯಾವುದೇ ಸಮೀಕ್ಷೆ ಮಾಡಿಸುತ್ತಿಲ್ಲ. ನಮ್ಮದು ಪ್ರಚಾರದ ಕೆಲಸವಷ್ಟೇ. ಸರ್ವೆಯನ್ನು ಪಕ್ಷ ಮಾಡಿಸುತ್ತದೆ ಎಂದು ತಿಳಿಸಿದರು.
ಇನ್ನು ಸಿದ್ದರಾಮಯ್ಯ ಅವರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಎಲ್ಲಿ ಸ್ಪರ್ಧೆ ಮಾಡಬೇಕು ಅವರೂ ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯಗೆ ಸಲಹೆ ಕೊಡುವಷ್ಡು ದೊಡ್ಡವನು ನಾನಲ್ಲ . ಕೆಎನ್ ರಾಜಣ್ಣನೂ ಅಲ್ಲ. ಸಿದ್ದರಾಮಯ್ಯ ಕೋಲಾರದಿಂದ ನಿಂತರೂ ಗೆಲ್ಲುತ್ತಾರೆ. ಎಲ್ಲೆ ನಿಂತರೂ ಗೆಲ್ತಾರೆ ಎಂದರು.
2018 ರ ಚುನಾವಣೆಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಸಿದ್ದರಾಮಯ್ಯ ಆಡಳಿತ ಹೇಗೆ ಎನ್ನುವುದು ಜನರಿಗೆ ಈಗ ಅರ್ಥ ಆಗುತ್ತಿದೆ ಎಂದು ವಿವರಿಸಿದರು.