ಕೋಲ್ಕತ್ತ: ಲೋಕಸಭೆ ಚುನಾವಣೆಯು ನಿಯಮದ ಪ್ರಕಾರ ಮುಂದಿನ ವರ್ಷ ನಡೆಯುವ ಸಾಧ್ಯತೆ ಇದೆ. ಆದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಬಿಜೆಪಿಯು ಈ ವರ್ಷದೊಳಗೇ ಲೋಕಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.
ಟಿಎಂಸಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು 2023ರ ಡಿಸೆಂಬರ್ ಅಥವಾ 2024 ಜನವರಿಯಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು. ಒಂದು ವೇಳೆ ಆ ಪಕ್ಷವೇನಾದರೂ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದರೆ, ದೇಶವು ನಿರಂಕುಶ ಆಡಳಿತ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿಯು, ಚುನಾವಣಾ ಪ್ರಚಾರಕ್ಕಾಗಿ ಈಗಾಗಲೇ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಿಕೊಂಡಿದೆ. ಹಾಗಾಗಿ ಚುನಾವಣಾ ಪ್ರಚಾರದ ವೇಳೆ ಹೆಲಿಕಾಪ್ಟರ್‌ಗಳು ಇತರ ರಾಜಕೀಯ ಪಕ್ಷಗಳಿಗೆ ಸಿಗುವುದಿಲ್ಲ. ಬಿಜೆಪಿ ಈಗಾಗಲೇ ಸಮುದಾಯಗಳ ನಡುವೆ ಹಗೆತನವನ್ನು ಬಿತ್ತಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಭಾರತವನ್ನ ಹಗೆತನದ ರಾಷ್ಟ್ರವನ್ನಾಗಿ ಮಾಡುತ್ತಾರೆ ಎಂದು ದೂರಿದರು.
ಇದನ್ನೂ ಓದಿ: ಕಪಾಳಮೋಕ್ಷಕ್ಕೆ ಗುರಿಯಾದ ಮುಸ್ಲಿಂ ವಿದ್ಯಾರ್ಥಿಯನ್ನ ದತ್ತು ಪಡೆಯಲು ಸಿದ್ಧ: ಕೇರಳ
ಈಗಿನ ಕೇಂದ್ರ ಸರ್ಕಾರವು ಪೂರ್ಣಾವಧಿಯ ಆಡಳಿತ ನಡೆಸಿದರೆ, ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದೆ ಎಂದೂ ಮಮತಾ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.