Friday, September 29, 2023
spot_img
- Advertisement -spot_img

ʼಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸೋ ವಿಚಾರ ಚರ್ಚೆಯಾಗಿಲ್ಲʼ

ಕೊಪ್ಪಳ : ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸೋ ವಿಚಾರ ಚರ್ಚೆಯಾಗಿಲ್ಲ , ಯಾರೂ ಬೇಕಾದ್ರೂ ಸ್ಪರ್ಧೆ ಮಾಡಬಹುದು ಎಂದು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡ್ತಾ ಇದ್ದೀನಿ, ಇವತ್ತಿನಿಂದ ಪಕ್ಷದ ಕಾರ್ಯಕ್ರಮ ಆರಂಭವಾಗ್ತಿದೆ, ನಮ್ಮ ಭಾಗದಲ್ಲಿ ಹಲವು ಜನರು ಗೆಲುವಿನ ನಿರೀಕ್ಷೆ ಇತ್ತು ಆದ್ರೆ ಸೋತಿದೀವಿ, ರಾಜ್ಯದಲ್ಲಿ ಸರ್ಕಾರ ಬಂದು 100 ದಿನಗಳಾಗಿವೆ, ಅವರು ಇದುವರೆಗೂ ಮಾಡಿದ ಸಾಧನೆ ಜನರು ನೋಡಬೇಕಿದೆ, ಸರ್ಕಾರಕ್ಕೆ ನಾವು 100 ದಿನದ ಸಾಧನೆಯನ್ನ ಕೇಳಬೇಕಿದೆ ಎಂದರು.

ಲೋಕಸಭೆ ಚುನಾವಣೆಯ ಬಳಿಕ ಇದ್ಯಾವ ಗ್ಯಾರಂಟಿ ಇರಲ್ಲ, 100 ದಿನದ ಸಾಧನೆ ಅಂದ್ರೆ ವರ್ಗಾವಣೆ ಬಿಟ್ಟು ಬೇರೆ ಏನೂ ಮಾಡಿಲ್ಲ, ಅದರಲ್ಲಿ ಲಂಚ ಭ್ರಷ್ಟಾಚಾರ ಹೆಚ್ಚಿದೆ,ಸರ್ಕಾರ ಇವತ್ತು 50% ಕಮೀಷನ್ ನಲ್ಲಿ ನಡೀತಾ ಇದೆ. ಇದನ್ನ ಜನರು ಮಾತಾಡ್ತಾ ಇದ್ದಾರೆ, ಕಾಂಗ್ರೆಸ್ ಬಂದ್ರೆ ಬರಗಾಲ ಅಂತ ಮಾತಾಡ್ತಾರೆ ಎಂದು ತಿಳಿಸಿದರು.

ಇವತ್ತು ತುಂಗಭದ್ರಾ ಜಲಾಶಯ ಏನಾಗಿದೆ ಅಂತ ನೋಡಬಹುದು ಜಲಾಶಯ ಖಾಲಿಯಾಗಿದೆ, ಈ ಭಾಗವನ್ನ ಬರಗಾಲ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕು, ನಮ್ಮ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ನಮ್ಮ ಭಾಗದಲ್ಲಿ ಸಾಕಷ್ಟು ತೊಂದ್ರೆ ಇದೆ ಎಂದು ಆಗ್ರಹಿಸಿದರು.


130 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಬಂದಿದೆ, ಇದರ ಬಗ್ಗೆ ಸರ್ಕಾರ ಗಮನ ಹರಿಸ್ತಾಇಲ್ಲ, ಜನರಿಗೆ ಯಾವಾಗ ಪ್ಯಾಕೇಜ್ ಕೊಡ್ತಾರೊ ಗೊತ್ತಿಲ್ಲ ಸರ್ಕಾರ ಆದಷ್ಟು ಬೇಗ ಪ್ಯಾಕೇಜ್ ಘೋಷಣೆ ಮಾಡಬೇಕು,
ಆಪರೇಷನ್ ಹಸ್ತ ಮಾಡ್ತಾ ಇದೆ‌, ನಿರೀಕ್ಷೆ ಮೀರಿ ಹೆಚ್ಚು ಸ್ಥಾನ ಗೆದ್ದರೂ ಆಪರೇಶನ್ ಮಾಡ್ತಾ ಇದ್ದಾರೆ, ರಾಜ್ಯದ ಸಮಸ್ಯೆಗಳು ಜನರಿಗೆ ಗೊತ್ತಾಗದೆ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ವಿವರಿಸಿದರು.

ನಮ್ಮ ಮಾಜಿ ಮಂತ್ರಿಗಳು ಶಾಸಕರು ಯಾರು ಕಾಂಗ್ರೆಸ್ ಗೆ ಹೋಗಲ್ಲ, ಅವರ ಪಕ್ಷದಲ್ಲೇ ಯಾವುದು ಸರಿಯಿಲ್ಲ, ಸರ್ಕಾರದಲ್ಲಿ ಕೆಲಸ ಮಾಡಲು ಯಾವ ಇಲಾಖೆಯಲ್ಲೂ ಹಣ ಇಲ್ಲ, ನಮ್ಮ ಸಚಿವರು ಶಾಸಕರು ಮಾಡಿದ ಯಾವ ಕೆಲಸವನ್ನ ಮಾಡಲು ಅವರಿಂದ ಸಾದ್ಯವಿಲ್ಲ, ಯಾವ ಅಭಿವೃದ್ಧಿ ಕೆಲಸಗಳು ಆಗಲ್ಲ, ಎಲ್ಲವನ್ನೂ ಕೇಂದ್ರ ಸರ್ಕಾರದ ಮೇಲೆ ಹಾಕುವ ಕೆಲಸ ಮಾಡ್ತಿದ್ದಾರೆ, ನಮ್ಮ ಸರ್ಕಾರದ ಸಚಿವರ ಮೇಲೆ ಎಲ್ಲ ತನಿಖೆಗಳನ್ನ ಮಾಡಲಿ ಪ್ರಜಾಪ್ರಭುತ್ವದಲ್ಲಿ ಯಾರು ಬೇಡ ಅನ್ನಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ‘ಆಪರೇಷನ್ ಕಾಂಗ್ರೆಸ್ ಹೆಸರಲ್ಲಿ ಶಾಸಕರನ್ನು ಬೆದರಿಸುತ್ತಿದ್ದಾರೆ’

ಕಾಂಗ್ರೆಸ್ ಅವಧಿಯಲ್ಲಿ ಅರ್ಕಾವತಿ ಹಗರಣ ಆಗಿತ್ತು ಎಲ್ಲವೂ ತನಿಖೆ ಆಗಬೇಕು,ಸೇಡಿನ ರಾಜಕಾರಣ ಮಾಡುವ ಕೆಲಸ ಮಾಡ್ತಾ ಇದ್ದಾರೆ, ತನಿಖೆ ಮಾಡಲು ಆಯೋಗ ರಚನೆ ಮಾಡಿದ್ದಾರೆ ಮಾಡಲಿ, ಎಲ್ಲವೂ ತನಿಖೆಯಾಗಲಿ, ಪಿಎಸೈ ಹಗರಣರ ಬಗ್ಗೆ ತನಿಖೆ ಆಗಿದೆ ಮತ್ತೊಮ್ಮೆ ಮಾಡಲು ಹೇಳ್ತಾಯಿದ್ದಾರೆ ಮಾಡಲಿ , ಯಾವುದೇ ದಾಖಲೆಗಳಿಲ್ಲ ನಮ್ಮ ಸರ್ಕಾರ ಮೇಲೆ 40% ಆರೋಪ ಮಾಡಿದ್ರು, ಆದ್ರೆ ಇವತ್ತು ಅವರ ಸರ್ಕಾರದಲ್ಲಿ 50% ಕಮೀಷನ್ ಇದೆ, ನಮ್ಮ ಸರ್ಕಾರದಲ್ಲಿ ಆದ ಹಗರಣದ ಮೇಲೆ ತನಿಖೆಯಾಗಲಿ, ಅವರ ಕಾಲದ ಹಗರಣದ ಮೇಲೆಯೂ ಆಗಲಿ ಎಂದು ಒತ್ತಾಯ ಮಾಡ್ತೀನಿ, ಗ್ಯಾರಂಟಿ ಹೆಸರಲ್ಲಿ ಜನರಿಗೆ ಪಂಗನಾಮ ಹಾಕಿದ ಸರ್ಕಾರ ಇದು, ಈ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.

ಜನಾರ್ದನ ರೆಡ್ಡಿಗೆ ಆಪ್ತರೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾರನ್ನ ಬೆಳೆಸಿದ್ರು ಅನ್ನೋದನ್ನ ಅವರನ್ನೇ ಕೇಳಬೇಕು, ಆವತ್ತು ಜೊತೆಗೆ ಇದ್ವಿ ಇವತ್ತು ಬೇರೆ ಆಗಿದ್ದೀವಿ ಎಂದು ಪ್ರತಿಕ್ರಿಯಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles