ವಿಜಯಪುರ : ಸ್ಟಾಲಿನ್ ಯಾವನ್ರಿ ? ಉದಯನಿಧಿಗೂ ಸನಾತನ ಧರ್ಮಕ್ಕೂ ಏನ್ರಿ ಸಂಬಂಧ ? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಸರ್ವೇಜನ ಸುಖಿನೋಭವಂತು’ ಅನ್ನುವ ಧರ್ಮ ಸನಾತನ ಧರ್ಮ. ಇವನ್ಯಾವನು ಬಚ್ಚಾ, ಅವನಿಗೆ ತಾಕತ್ ಇದ್ರೆ ಮುಸಲ್ಮಾನರ ವಿರುದ್ದ ಮಾತಾಡಲಿ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರನ್ನ ಮಾಡಬೇಕಿತ್ತು ಯಾಕೆ ಮಾಡಲಿಲ್ಲ ಅನ್ನೋದು ಗೊತ್ತಿಲ್ಲ. ಈಗಾಗಲೇ ಕೇಂದ್ರದ ಮುಖಂಡರು ಬಂದು ವರದಿ ಸಂಗ್ರಹಿಸಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಜಿ.ಪರಮೇಶ್ವರ ಅಂತ ಹೆಸರಿದೆ … ಜಿ ಅಂದ್ರೆ ಯಾರು ? ಅವರ ಅಜ್ಜ ಮರಿಯಪ್ಪ ,ಮುತ್ತಜ್ಜನ ಹೆಸರೆ ಗೊತ್ತಿಲ್ಲದ ಪರಮೇಶ್ವರಗೆ ಸಾವಿರಾರು ಜನ್ಮದ ಇತಿಹಾಸವಿರುವ ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಕೇಳ್ತಾರೆ. ನಿಮಗೆ ತಾಕತ್ ಇದ್ರೆ ಮುಸಲ್ಮಾನ ಧರ್ಮದ ಬಗ್ಗೆ ಮಾತಾಡಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ : ಸಿಎಂ, ಡಿಸಿಎಂಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಆಕ್ರೋಶ
ನನ್ನ ರಾಷ್ಟ್ರೀಯ ನಾಯಕರ ಬಗ್ಗೆ ನನಗೆ ಗೌರವ ಇದೆ. ಸಂತೋಷ ಜಿ ಮದುವೆಯಾಗದೆ ಪಕ್ಷ ಕಟ್ಟಿದ್ದಾರೆ, ಬಿಜೆಪಿಯಲ್ಲಿ ಯಾವ ಜಾತಿಯವರನ್ನ ತುಳಿದಿಲ್ಲ, ನಮ್ಮಲ್ಲಿ ಜಾತಿ ಹೆಸರಿನ ಮೇಲೆ ರಾಜಕಾರಣ ಮಾಡಲ್ಲ , ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಇದ್ದಾಗ ನೀವು ಯಾರಿಗೆ ಬಕೆಟ್ ಹಿಡಿದಿದ್ರಿ ? ಬಿಜೆಪಿಯಲ್ಲಿ ಇರುವಾಗ ಪಕ್ಷ ತಾಯಿ ಎಂದಿದ್ರು ಒಂದು ವಿಧಾನಸಭೆ ಟಿಕೆಟ್ ಗಾಗಿ ತಾಯಿನಾ ಬಿಟ್ಟು ಹೋದ್ರಲ್ಲ ಎಂದು ಶೆಟ್ಟರ್ ಗೆ ತಿರುಗೇಟು ನೀಡಿದರು.
ಪ್ರದೀಪ ಶೆಟ್ಟರ್ ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಹೋಗ್ತಿದ್ರೆ ಹೋಗ್ಲಿ ..ಅವರಣ್ಣ ಮುಖ್ಯಮಂತ್ರಿ ಇದ್ದಾಗ ಲಿಂಗಾಯತರನ್ನ ತುಳಿಲಿಲ್ವಾ ? ಕಾಂಗ್ರೆಸ್ ಗ್ಯಾರಂಟಿ ಘೋಷಣೆಗೆ ಗಮನ ಕೊಡುತ್ತಿದ್ದಾರೆ, ಕೊಡಲಿ ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಹರಿಹಾಯ್ದರು.
ʼಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಹನಿಮೂನ್ ಮೂಡ್ ನಲ್ಲಿದ್ದಾರೆʼ
ಅತಿವೃಷ್ಠಿ, ಅನಾವೃಷ್ಠಿ ಬಗ್ಗೆ ಸಿಎಂ, ಉಸ್ತುವಾರಿ ಸಚಿವರು ಗಮನ ಕೊಡಬೇಕಾಗಿತ್ತು ಆದರೆ ಕೊಟ್ಟಿಲ್ಲ,
ರೈತರು ಆತ್ಮಹತ್ಯೆ ಮಾಡಿಕೊಂಡಿರೋದು ಅವರ ಆರ್ಥಿಕ ಸಮಸ್ಯೆಯಿಂದ ಮಾಡಿಕೊಂಡಿದ್ದಾರೆ ಎಂದಿದ್ದು, ರೈತರಿಗೆ ಈ ಮೂಲಕ ಸಚಿವರು ಅವಮಾನ ಮಾಡಿದ್ದಾರೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಹನಿಮೂನ್ ಮೂಡ್ ನಲ್ಲಿದ್ದಾರೆ.ಯಾರು ರೈತರ ನೆರವಿಗೆ ಬರುತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ, ರಸ್ತೆ,ಶಾಲೆಗಳ ,ಅಂಗನವಾಡಿ ಗಳು ರಿಪೇರಿ ಆಗಿಲ್ಲ… ಗ್ಯಾರಂಟಿ ಕಾರ್ಡ್ ವಿರುದ್ಧ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಸಿದ್ದರಾಮಯ್ಯ ನವರ ಸರ್ಕಾರಕ್ಕೆ ಸ್ಥಿರತೆ ಇಲ್ಲ ಅಸ್ಥಿರತೆ ಕಾಡುತ್ತಿದೆ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.