Friday, September 29, 2023
spot_img
- Advertisement -spot_img

ಅಮಿತ್ ಶಾ ರಿಪೋರ್ಟ್ ಕಾರ್ಡ್ ಕೇಳಿದ್ರೆ ಇಸ್ರೋ ಮಾಡಿದ್ದು ನಾವೇ ಅನ್ನಿ: ಮಲ್ಲಿಕಾರ್ಜುನ ಖರ್ಗೆ

ಹೈದರಾಬಾದ್ : ತೆಲಂಗಾಣದ ಸಿಎಂ ಕೆಸಿಆರ್ ಇದುವರೆಗೆ ಇಂಡಿಯಾ ಒಕ್ಕೂಟದ ಯಾವುದೇ ಸಭೆಗೆ ಯಾಕೆ ಹಾಜರಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಬಿಆರ್ ಎಸ್ ಪಕ್ಷಗಳ ನಡುವೆ ಗೆಳೆತನವಿದೆ. ಅವರ ನಡುವೆ ಒಳ ಒಪ್ಪಂದಗಳಿರುವಾಗ ಪರಸ್ಪರರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ. ಕೆಸಿಆರ್ ಬಿಜೆಪಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

“ಕೇಂದ್ರದಲ್ಲಿ ಮೋದಿ ವಿರುದ್ಧ ಹೋರಾಡಲು 26 ಪಕ್ಷಗಳು ಒಟ್ಟಾಗಿವೆ. ಆದರೆ, ನಿಮ್ಮ ಕೆಸಿಆರ್ ಯಾವುದೇ ಸಭೆಗೆ ಹಾಜರಾಗಿಲ್ಲ. ಮೋದಿಯನ್ನು ಸೋಲಿಸಲು ಎಲ್ಲಾ ಜಾತ್ಯತೀತ ಪಕ್ಷಗಳು ಒಗ್ಗೂಡುತ್ತಿವೆ. ಆದರೆ, ತಮ್ಮನ್ನುತಾವು ಜಾತ್ಯತೀತ ಪಕ್ಷ ಎಂದು ಕರೆಸಿಕೊಳ್ಳುವ ಬಿಆರ್ ಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದೆ. ಆದರೆ ನಾವು ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟಿಗೆ ತರುತ್ತಿದ್ದೇವೆ. ನಮ್ಮ ಗುರಿ ಕೇಂದ್ರದಿಂದ ಬಿಜೆಪಿಯನ್ನು ಮತ್ತು ರಾಜ್ಯಗಳಿಂದ ಬಿಜೆಪಿಯನ್ನು ಬೆಂಬಲಿಸುವ ಕೆಸಿಆರ್‌ನಂತಹವರನ್ನು ತೊಲಗಿಸುವುದಾಗಿದೆ” ಎಂದು ಹೇಳಿದರು.

ಅಮಿತ್ ಶಾ ಕೇಳಿದ್ರೆ ಇಸ್ರೋ ತೋರಿಸಿ : ಈ ಹಿಂದೆ, ಕಾಂಗ್ರೆಸ್ 70 ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ, ಈಗ ಅವರ ಆಡಳಿತ ಅವಧಿ ತೆಗೆದು ಹಾಕಿ 53 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ? ಎಂದು ಕೇಳ್ತಿದ್ದಾರೆ. ನಾಳೆ ಅಮಿತ್ ಶಾ ಬರ್ತಿದ್ದಾರೆ. ಅವರು ಕಾಂಗ್ರೆಸ್ ಏನು ಮಾಡಿದೆ ಎಂದು ರಿಪೋರ್ಟ್ ಕಾರ್ಡ್ ಕೇಳಬಹುದು. ಆಗ ಅವರಿಗೆ ಇಸ್ರೋ ಮಾಡಿದ್ದು ನಾವು , ಹೈದರಾಬಾದ್ ಅನ್ನು ಭಾರತದೊಂದಿಗೆ ಸೇರಿಸಿದ್ದು ಕಾಂಗ್ರೆಸ್ ಅಂತ ಹೇಳಿ ಎಂದು ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles